fbpx

ಕೈಗೆ “ಕೈ”ಜೋಡಿಸಿದ ಮಾಜಿ ಸಚಿವ


ಕೊಡಗು:ಮಾಜಿ ಸಚಿವ ಬಿ, ಎ, ಜೀವಿಜಯ ಇದೇ ತಿಂಗಳು 9 ರಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ.ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಮಾಡಲು ಎಲ್ಲಾ ಸಿದ್ದತೆ ನಡೆದಿದ್ದು ಸುದೀರ್ಘ ಜೆಡಿಎಸ್ ಸೇವೆಗೆ ಜೀವೀಜಯ ವಿದಾಯ ಹೇಳಲಿದ್ದಾರೆ.

ಜೀವಿಜಯ ಸೇರ್ಪಡೆಯಿಂದ ಪಕ್ಷಕ್ಕೆ ಇನ್ನಷ್ಟು ಬಲ ಸಿಗಲಿದೆ ಎಂದು ಅಭಿಪ್ರಾಯ ಪಟ್ಟ ಕೊಡಗು ಕಾಂಗ್ರೆಸ್ ಅಧ್ಯಕ್ಷ ಕೆ ಕೆ. ಮಂಜುನಾಥ್ ಕುಮಾರ್ ಜೀನವಿಜಯ ಪಕ್ಷಕ್ಕೆ ಬರುವುದು ಖಂಡಿತ ಎಂದು ಸ್ಪಷ್ಟ ಪಡಿಸಿದ್ದಾರೆ. ಈ ನಡುವೆ ಜೆಡಿಎಸ್ ನಲ್ಲಿದ್ದ ಜೀವಿಜಯ ತನ್ನ ಮಗನ ಭವಿಷ್ಯದ ಹಿನ್ನಲೆಯಲ್ಲಿ ಪಕ್ಷ ತೊರೆಯುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಬಿ ಗಣೇಶ್ ತಿಳಿಸಿದ್ದು,ಕುಶಾಲನಗದಮರ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಭ ಬಿಜೆಪಿ ಟರ ಇರುವುದರ ಬಗ್ಗೆ ದಾಖಲೆಗಳೂ ಇರುವುದಾಗಿ,ಸೂಕ್ತ ಸಂದರ್ಭ ಬಿಡುಗಡೆಯಾಗಲಿದೆ ಎಂದು ಗಣೇಶ್ ತಿಳಿಸಿದ್ದಾರೆ‌.

error: Content is protected !!