ಕೇರಳ, ಮಹಾರಾಷ್ಟ್ರ ರಾಜ್ಯಗಳಿಂದ ಕೊಡಗಿಗೆ ಬರುವವರ ಗಮನಕ್ಕೆ.


ಸರ್ಕಾರದ ಆದೇಶದಂತೆ ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಕ್ಕೆ ಹೊಂದಿಕೊಂಡಿರುವ ಜಿಲ್ಲೆಗಳಲ್ಲಿ ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಹಾಗೂ ಸೋಂಕು ಹೆಚ್ಚಳವಾಗದಂತ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳಲು ನಿರ್ದೇಶನವಿರುತ್ತದೆ.

ಕೊಡಗು ಜಿಲ್ಲೆಯು ನೆರೆಯ ರಾಜ್ಯದೊಂದಿಗೆ ಗಡಿಯನ್ನು ಹೊಂದಿದ್ದು, ಈ ಜಿಲ್ಲೆಯಲ್ಲಿ ಕೋವಿಡ್-19 ಹರಡದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.

  1. ಜಿಲ್ಲೆಯ ಎಲ್ಲಾ ಹೋಟೆಲ್, ಹೋಂ-ಸ್ಟೇ, ರೆಸಾರ್ಟ್, ಲಾಡ್ಜ್ ಮುಂತಾದ ವಾಸ್ತವ್ಯ ಸೇವೆಗಳನ್ನು ನೀಡುವ ಸ್ಥಳಗಳಿಗೆ ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಒಳಗಿನ ಅವಧಿಯ ಒಳಗೆ ಪಡೆದ RT+PCR ನೆಗಟಿವ್ ವರದಿಯನ್ನು ಹೊಂದಿರತಕ್ಕದ್ದು, ಇದನ್ನು ಖಚಿತಪಡಿಸಿಕೊಳ್ಳುವುದು ಆಯಾ ಸಂಸ್ಥೆಗಳ/ ವ್ಯವವಸ್ಥಾಪಕರ/ ಮಾಲೀಕರ ಜವಾಬ್ದಾರಿ ಆಗಿರುತ್ತದೆ.

2 . ಮೇಲಿನ ವಿಚಾರವಲ್ಲದ ಯಾರೇ ವ್ಯಕ್ತಿ ಇತರೆಡೆಯಿಂದ ಜಿಲ್ಲೆಗೆ ಆಗಮಿಸಿದಲ್ಲಿ ಅವರ ವಿವರಗಳನ್ನು ಸಂಬಂಧಪಟ್ಟ ಕಾರ್ಯವ್ಯಾಪ್ತಿಯ ಗ್ರಾಮೀಣ / ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಿಂದಾಗ್ಗೆ ನೀಡುವುದು.

ಈ ಆದೇಶದ ಉಲ್ಲಂಘನೆ / ದುರುಪಯೋಗವು ಡಿಸಾಸ್ಟರ್ ಮ್ಯಾನೇಜ್ ಮೆಂಟ್ ಆಕ್ಟ್-2005ರ ಕಲಂ 51 ರಿಂದ 60, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್-2020ರ ಕಲಂ 9, ಭಾರತೀಯ ದಂಡ ಸಂಹಿತೆ 1860ರ ಕಲಂ 188 ಮತ್ತು ಇನ್ನಿತರ ಸಂಬಂಧಿತ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಕೊಡಗು ಜಿಲ್ಲಾಧಿಕಾರಿ ತಿಳಿಸಿದ್ದಾರೆ

error: Content is protected !!