ಕೇರಳ ಗಡಿಯಲ್ಲಿ ತೀವ್ರ ಕಟ್ಟೆಚ್ಚರ

ಕೋವಿಡ್ ಮೂರನೇ ಅಲೆ ಭೀತಿ ಜೊತೆಗೆ ಕೊಡಗಿನಲ್ಲಿ ಇನ್ನು ಅನ್ಲಾಕ್ ಆಗುವ ಮೊದಲೇ ಜಿಲ್ಲೆಯತ್ತ ಹೊರ ರಾಜ್ಯ,ಜಿಲ್ಲೆಗಳಿಂದ ವಾಹನ ಗಳು ಬರುತ್ತಿರುವ ಹಿನ್ನಲೆ ಕೇರಳ ಗಡಿಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಕೇರಳದ ಗಡಿ ಹಂಚಿಕೊಂಡಿರುವ ಕರಿಕೆ, ಕುಟ್ಟ, ಮಾಕುಟ್ಟ ಭಾಗದಲ್ಲಿ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸಲಾಗುತ್ತಿದ್ದು,ಚಾಲಕರು ಮತ್ತು ಪ್ರಯಾಣಿಕರ ಬಳಿ ನೆಗೆಟಿವ್ ರಿಪೋರ್ಟ್ ಕಡ್ಡಾಯ ವಾಗಿ ಇದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

error: Content is protected !!