ಕೇರಳ ಗಡಿಯಲ್ಲಿ ಎಂದಿನಂತೆ ಮಾರ್ಗ ಸೂಚಿ

ರಾಜ್ಯ ಸರ್ಕಾರದ ಜುಲೈ ದಿನಾಂಕ 03 ರಂದು ಕೋವಿಡ್ ಮಾರ್ಗ ಸೂಚಿ ಮುಂದುವರೆಸಲಾಗಿದ್ದು ಆಗಸ್ಟ್ 2 ರ ಬೆಳಗ್ಗೆ 6 ಗಂಟೆವರೆಗೆ ಮುಂದುವರೆಯಲಿದೆ. ಅದರಂತೆ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಹೆಚ್ಚುವರಿ ಅಂಶಗಳಂತೆ ಸರ್ಕಾರದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿ ಆದೇಶಿಸಲಾಗಿದ್ದು,
ಪ್ರತಿದಿನ ರಾತ್ರಿ 10:00 ಗಂಟೆಯಿಂದ ಮರುದಿನ ಬೆಳಗ್ಗೆ 5:00 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಹಾಗೂ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸುವುದು.

ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರಿಗಾಗಿ ಸರ್ಕಾರ ಹೊರಡಿಸಿರುವ ವಿಶೇಷ ಸರ್ವೇಕ್ಷಣಾ ಮಾನದಂಡ / ನಡೆಸಬೇಕಾದ ಕಾರ್ಯಗಳು ಮುಂದಿನ ಆದೇಶದವರೆಗೆ ಜಾರಿಯಲ್ಲಿರುತ್ತದೆ.

ಈ ಆದೇಶದ ದುರುಪಯೋಗ ಅಥವಾ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188, ದಿ ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020, ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆಕ್ಟ್ 2005ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಚಾರಃಲತಾ ಸೋಮಲ್ ತಿಳಿಸಿದ್ದಾರೆ.

error: Content is protected !!