ಕೇರಳದಿಂದ ವಿರಾಜಪೇಟೆ, ಮಡಿಕೇರಿಗೆ ಕೋವಿಡ್ ಆತಂಕ: ಸೋಮವಾರಪೇಟೆಗೆ ಮೈಸೂರು ಹಾಸನದಿಂದ ಭೀತಿ.ಕೊಡಗಿನ ಪಕ್ಕದ ಜಿಲ್ಲೆ, ರಾಜ್ಯಗಳಲ್ಲಿ ಕೋರೋನಾ ತಾಂಡವವಾಗುತ್ತಿದ್ದು ವಿರಾಜಪೇಟೆ ಭಾಗದಲ್ಲಿ ಮಿತಿ ಮೀರಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಕೋರೋನಾ ಸೋಂಕು ಪ್ರಕರಣ ದಾಖಲಾಗಿದ್ದು,ದಕ್ಷಿಣ ಕನ್ನಡದಲ್ಲಿ ಇಂದು 438 ಪ್ರಕರಣ ವರದಿಯಾಗಿದೆ.

ಮೈಸೂರಿನಲ್ಲಿ 98, ಹಾಸನದಲ್ಲಿ 80, ಚಿಕ್ಕಮಗಳೂರಿನಲ್ಲಿ 52 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿಗಿಂತ (348) ದಕ್ಷಿಣ ಕನ್ನಡ ಜಿಲ್ಲೆಯೇ (438) ಕೋವಿಡ್ ಹಾಟ್ ಸ್ಪಾಟ್ ಆಗಿದೆ.ವಿರಾಜಪೇಟೆ ಭಾಗದ ಗಡಿಯಾದ ಕೇರಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗದೇ ದಿನೇದಿನೇ ಹೆಚುತ್ತಿರುವುದು ಆತಂಕಕಾರಿಯಾಗಿದೆ.

ಕೊಡಗಿನಲ್ಲಿ ಭಾನುವಾರ 112 ಪ್ರಕರಣ – ಪಾಸಿಟಿವಿಟಿ ಪ್ರಮಾಣ ಶೇ.3.76. ಸೋಮವಾರಪೇಟೆ ತಾಲೂಕಿನಲ್ಲಿಯೇ ಹೆಚ್ಚು (47) ಪ್ರಕರಣ. ಮಡಿಕೇರಿ ತಾಲೂಕಿನಲ್ಲಿ 19, ವಿರಾಜಪೇಟೆಯಲ್ಲಿ 27 ಪ್ರಕರಣಗಳು. ಗುಣಮುಖ ಪ್ರಕರಣಕ್ಕಿಂತ ( 65 ಮಂದಿ ಗುಣಮುಖರಾದವರು) ಹೊಸ ಪ್ರಕರಣಗಳೇ (112) ಹೆಚ್ಚು.

error: Content is protected !!