fbpx

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ನಿಧನ!

ನವದೆಹಲಿ: ಕೇಂದ್ರ ಸಚಿವ ರಾಮ್​ ವಿಲಾಸ್​ ಪಾಸ್ವಾನ್ (74)​ ಇಂದು ನಿಧನರಾಗಿದ್ದಾರೆ. ಕೆಲವೇ ದಿನಗಳ ಹಿಂದಷ್ಟೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಅಗತ್ಯ ಬಿದ್ದರೆ ಇನ್ನೂ ಒಂದುವಾರದ ಬಳಿಕ ಮತ್ತೊಂದು ಚಿಕಿತ್ಸೆ ಮಾಡಬೇಕು ಎಂದು ಅವರ ಮಗ ಚಿರಾಗ್​ ಪಾಸ್ವಾನ್​ ತಿಳಿಸಿದ್ದರು.

ಕಳೆದ ಕೆಲವು ದಿನಗಳಿಂದಲೂ ರಾಮ್​ ವಿಲಾಸ್ ಪಾಸ್ವಾನ್​ ದೆಹಲಿಯ ಪೋರ್ಟೀಸ್​ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಲೋಕ ಜನಶಕ್ತಿ ಪಾರ್ಟಿಯ ಸಂಸ್ಥಾಪಕರಾದ ರಾಮ್ ವಿಲಾಸ್​ ಪಾಸ್ವಾನ್​, 8 ಬಾರಿ ಸಂಸದರಾಗಿದ್ದರು.

ಇಂದು ತಮ್ಮ ತಂದೆ ನಿಧರಾಗಿದ್ದನ್ನು ಪುತ್ರ ಚಿರಾಗ್​ ಅವರು ಟ್ವೀಟ್​ ಮಾಡಿ ತಿಳಿಸಿದ್ದಾರೆ. ಬಾಲ್ಯದ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

error: Content is protected !!