fbpx

ಕೇಂದ್ರ ಸಚಿವ ನಿತಿನ್ ಗಡ್ಕರಿಯನ್ನು ಭೇಟಿ ಮಾಡಿದ ಶಾಸಕದ್ವಯರು

ಕೊಡಗು ಜಿಲ್ಲಾ ಖಾಸಗಿ ಪ್ರವಾಸದಲ್ಲಿರುವ ಕೇಂದ್ರ ರಸ್ತೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿಯನ್ನು ವಿರಾಜಪೇಟೆಯ ಶಾಸಕ ಕೆ.ಜಿ ಬೋಪಯ್ಯ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಸುಮಾರು ಒಂದು ಗಂಟೆಯ ಕಾಲ ಜಿಲ್ಲೆಯ ಹೆದ್ದಾರಿ ಅಭಿವೃದ್ದಿ ಮತ್ತು ಪ್ರವಾಸೋದ್ಯಮ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಇದೇ ವೇಳೆ ಕೊಡಗಿನ ಹೆದ್ದಾರಿಗಳ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ಥಾವನೆ ಕಳುಹಿಸಿದರೆ ಆಧ್ಯತೆ ಪರಿಗಣಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.
ಇದಕ್ಕೂ ಮೊದಲು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಭೇಟಿ ಮಾಡಿ ಕೊಡ್ಲಿಪೇಟೆ, ಮಡಿಕೇರಿ, ವಿರಾಜಪೇಟೆ, ಮಾಕುಟ್ಟವರೆಗಿನ ರಸ್ತೆಯನ್ನು ಮೇಲ್ದರ್ಜೆಗೆ ಏರಿಸುವಂತೆ ಮನವಿ ಮಾಡಿದರು.

error: Content is protected !!