fbpx

ಕೆಸರು ಗದ್ದೆಯಂತೆ ಆಗಿರುವ ರಸ್ತೆ!

ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಮತ್ತು ಸುಂಟಿಕೊಪ್ಪ ನಡುವಿನ ರಸ್ತೆ ಕೆಸರು ಗದ್ದೆಯಂತೆ ಭಾಸವಾಗುತ್ತಿದೆ.

ನಿರಂತರ ಮಳೆಯ ಪರಿಣಾಮ ವಾಹನ ಸವಾರರು, ಪಾದಾಚಾರಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲವು ವರ್ಷಗಳ ಹಿಂದೆ ಡಾಂಬಾರು ಕಂಡಿದ್ದ ಈ ರಸ್ತೆಯಲ್ಲಿ ನಿರಂತರ ಟಿಂಬರ್ ಸಾಗಿಸುವ ಲಾರಿಗಳಿಂದ ಹಾಳಾಗಿದ್ದು, ಈ ಭಾರಿ ಮಳೆಗೆ ಓಡಾಡಲು ಅಸಾಧ್ಯ ಎನ್ನುವಂತಾಯಿತು. ಕೆಲವು ಆಟೋಗಳು ಅಪಘಾತಕ್ಕೆ ಈಡಾಗಿರುವ ಘಟನೆಗಳೂ ನಡೆದಿದೆ. ಇದೀಗ ಗ್ರಾಮಸ್ಥರು ರಸ್ತೆ ದುರಸ್ಥಿ ಮಾಡಿಸಿಕೊಡುವಂತೆ ಜಿಲ್ಲಾಡಳಿತ ಮೊರೆ ಹೋಗಿದ್ದಾರೆ.

error: Content is protected !!