ಕೆಸರುಮಯ ಕಚ್ಚಾ ರಸ್ತೆಯಲ್ಲಿ ಸಂಚಾರಕ್ಕೆ ಜನರ ಪರದಾಟ

ಮಳೆ ಬಂದರೆ ಈ ಗ್ರಾಮದ ಕಿರುರಸ್ತೆ ಕೆಸರು ತುಂಬಿದ ಗದ್ದೆಯದಂತೆ ಭಾಸವಾಗುತ್ತದೆ.ದಿನ ನಿತ್ಯ ಕೆಲಸಕ್ಕೆ ಶಾಲೆಗೆ ಹೋಗುವವರ ಪಾಡು ಅಷ್ಟಿಷ್ಟಲ್ಲ. ಕೂಡಿಗೆ ಗ್ರಾಮ ಪಂಚಾಯಿತಿಯ ಸೀಗೆಹೊಸೂರುನಲ್ಲಿ ಇದೆ ಈ ಪರಿಸ್ಥಿತಿ.

ಈ ಗ್ರಾಮದಲ್ಲಿ ಸುಮಾರು 500 ಮೀಟರ್ ಉದ್ದ ಕಿರು ರಸ್ತೆಯಾಗಿದ್ದು, 15 ಕುಟುಂಬಗಳು ವಾಸವಾಗಿವೆ. ದಿನ ನಿತ್ಯ ಅವರ ಕೆಲಸ ಕಾರ್ಯಗಳಿಗೆ ಇದೇ ರಸ್ತೆಯಲ್ಲಿ ಸಂಚರಿಸಬೇಕು.ಆದರೆ ಈ ರಸ್ತೆಯನ್ನು ಸರಿಪಡಿಸುವ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಗ್ರಾಮಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ. ಹಾಗಾಗಿ ದಿನನಿತ್ಯ ಇಲ್ಲಿಯ ಜನರು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಾ ಇದರಲ್ಲಿ ಪರದಾಟದಲ್ಲೇ ಪಯಣಿಸುತ್ತಿದ್ದಾರೆ.

error: Content is protected !!