ಕೆಸರುಗದ್ದೆ ಕ್ರೀಡಾಕೂಟಕ್ಕೆ ತೆರೆ

ಹಲವು ಕಾರಣಗಳಿಂದ ಕ್ರೀಡಾ ತವರೂರು ಕೊಡಗಿನಲ್ಲಿ ಸ್ಥಗಿತಗೊಂಡಿದ್ದ ಮಳೆಗಾಲದ ಕೆಸರುಗದ್ದೆ ಕ್ರೀಡಾಕೂಟ ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ನೆರವೇರಿತು.

ಇಲೊಲಿನ ಹಾರಳ್ಳಿ ಚೆನ್ನಕೇಶವ ಯವಕರ ಬಳಗದ ವತಿಯಿಂದ ಗ್ರಾಮದ ಗದ್ದೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಕೂಗೂರು ಗ್ರಾಮದ ತಂಡ ಮೂದಲ ಸ್ಥಾನವನ್ನು ಪಡೆದರೆ, ಬೀಟಿಕಟ್ಟೆ ಫ್ರೆಂಡ್ಸ್ ಕ್ಲಬ್ ದ್ವಿತೀಯ ಸ್ಥಾನ ಪಡೆಯಿತು.

ಹಗ್ಗಜಗ್ಗಾಟ ಪಂದ್ಯದಲ್ಲಿ ಶುಂಠಿ ತಂಡ ಪ್ರಥಮ ಗಾಂಧಿ ಫ್ರೆಂಡ್ಸ್ ಚೆನ್ನಾಪುರ ತಂಡ ದ್ವಿತೀಯ ಸ್ಥಾನ ಪಡೆದರೆ. ಮಹಿಳೆಯರ ಹಗ್ಗಜಗ್ಗಾಟದಲ್ಲಿ ಹಿರಿಕರ ಗ್ರಾಮ ಪ್ರಥಮ ಹಾರಳ್ಳಿ ತಂಡ ದ್ವಿತೀಯ ಸ್ಥಾನ ಪಡೆಯಿತು.

ಮಕ್ಕಳ ವಿಭಾಗ ಕೆಸರುಗದ್ದೆ ಓಟದ ಸ್ಪರ್ಧೆಯಲ್ಲಿ ಕೂಗೂರು ಗ್ರಾಮದ ಅಶೋಕ್ ಪ್ರಥಮ,ಹಾರಳ್ಳಿ ಗ್ರಾಮದ ಜಿಯಾನ್ ದ್ವಿತೀಯ ಸ್ಥಾನ ಪಡೆದುಕೊಂಡರು.

error: Content is protected !!