ಕೆರೆಯಲ್ಲಿ ಮುಳುಗಿ ಇಬ್ಬರು ಜಲಸಮಾಧಿ!

ಶನಿವಾರಸಂತೆ: ಶಿರಂಗಾಲದಲ್ಲಿ ನಡೆದ ದುರ್ಘಟನೆ ಇದಾಗಿದ್ದು, ಗುಡುಗಳಲೆಯ ಟೈಲರ್ ವೆಂಕಟೇಶ್ ಎಂಬುವವರ ಮಗಳು ನೀರಿನಲ್ಲಿ ಮುಳುಗಿದ ಬಾಲಕಿ. ಆಕೆಯನ್ನು ರಕ್ಷಿಸಲು ಹೋದ ಚಿಕ್ಕಪ್ಪನೂ ಮುಳುಗಿ ಜಲಸಮಾಧಿಯಾಗಿದ್ದಾರೆ. ಇಂದು ಸಂಜೆ 4.30 ರಲ್ಲಿ ನಡೆದ ದುರ್ಘಟನೆ. ಮೃತ ದೇಹ ಹೊರ ತೆಗೆಯಲು ಅಗ್ನಿ ಶಾಮಕ ದಳ ಮತ್ತು ಶನಿವಾರಸಂತೆ ಪೊಲೀಸ್ ಠಾಣೆ ಸಿಬ್ಬಂದಿಯವರಿಂದ ಕಾರ್ಯಾಚರಣೆ.‌ ರಾತ್ರಿ 8.00 ಗಂಟೆಗೆ ಬಾಲಕಿಯ ಮೃತದೇಹ ಪತ್ತೆಯಾಗಿದೆ.

ಮತ್ತೊಂದು ಮೃತ ದೇಹವನ್ನು ಹೊರ ತೆಗೆಯಲು ಕೆರೆ ಒಡೆಯುವುದು ಅನಿವಾರ್ಯವಾಗಿದೆ ಎನ್ನಲಾಗಿದೆ. ಆದರೆ ಇದಕ್ಕೆ ಕೆರೆಯ ಮಾಲೀಕ ಸಮ್ಮತಿಸುತ್ತಿಲ್ಲ ಎಂದು ತಿಳಿದುಬಂದಿದೆ.

error: Content is protected !!