ಕೆರೆಯಲ್ಲಿ ಕಾಳಿಂಗ ಸೆರೆ

ಕೊಡಗು: ನಾಗರಹೊಳೆ ಅಂಚಿನಲ್ಲಿರುವ ಕುಟ್ಟ ಗ್ರಾಮದ ಕಾಯಿಮಾನಿಯ ಕಾಫಿ ಬೆಳೆಗಾರ ಕಂಬಣ್ಣ ಎಂಬುವವರ ಕೆರೆಯಲ್ಲಿ ಅಂದಾಜು 12 ವರ್ಷದ 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರು ಇವರ ಬೃಹತ್ ಕೆರೆಯಲ್ಲಿ ಈಜಾಡುತ್ತಿರುವುದನ್ನು ಗಮನಿಸಿ ಮಾಲೀಕರಿಗೆ ಸುದ್ದಿ ಮುಟ್ಟಿಸಿದ್ದು,ಉರಗ ತಜ್ಞ ಬೋಸ್ ಮಾದಪ್ಪ ಸ್ಸಳಕ್ಕೆ ತಲುಪುವಷ್ಟರಲ್ಲಿ ತೋಟದೊಳಗೆ ಸೇರಿಕೊಂಡ ಕಾಳಿಂಗನನ್ನು ಸತತ ಪ್ರಯತ್ನದಿಂದ ಸೆರೆ ಹಿಡಿಯಲಾಯಿತು.ಸದ್ಯ ಕಾಳಿಂಗ ಅರಣ್ಯ ಇಲಾಖೆ ಸಮ್ಮುಖದಲ್ಲಿ ಬ್ರಹ್ಮಗಿರಿ ವನ್ಯಜೀವಿ ವಲಯದ ಅರಣ್ಯಕ್ಕೆ ಸೇರಿಕೊಂಡಿದ್ದಾನೆ.

error: Content is protected !!