ಕೆರೆಗೆ ಬಿದ್ದು ಮರಿಯಾನೆ ಸಾವು!

ಕೊಡಗು: ನೀರು ಕುಡಿಯಲು ಬಂದಿದ್ದ ಕಾಡಾನೆ ಮರಿಯೊಂದು ಕಾಲು ಜಾರಿ ಕೆರೆಗೆ ಬಿದ್ದು ಕೆಸರಿನಲ್ಲಿ ಹೊರಬಾರಲಾಗದೆ ಸಾವನಪ್ಪಿರುವ ಘಟನೆ ಕಕ್ಕಬೆ ಸಮೀಪದ ಮರಂದೋಡ ಗ್ರಾಮದಲ್ಲಿ ನಡೆದಿದೆ.

ಆಹಾರ ಅರಸಿಕೊಂಡು ಬಂದಿದ್ದ ಹಿಂಡಿನಲ್ಲಿದ್ದ ಈ ಮರಿಯಾನೆ ಖಾಸಗಿ ಕಾಫಿ ಎಸ್ಟೇಟ್ ನಲ್ಲಿ ಓಡಾಡುತ್ತಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು, ಅಷ್ಟರಲ್ಲಾಗಲೇ ಮರಿ ಕೆರೆಗೆ ಬಿದ್ದು ಸಾವನಪ್ಪಿದ್ದು, ಕಾರ್ಮಿಕರು ತೋಟಕ್ಕೆ ತೆರಳಿದ ವೇಳೆ ಬೆಳಕಿಗೆ ಬಂದಿದೆ. ಸ್ಥಳೀಯರ ಸಹಾಯದಿಂದ ಮರಿಯನ್ನು ಮೇಲಕ್ಕೆ ಎತ್ತಲಾಯಿತು. ಇತ್ತ ಮರಿಯ ತಾಯಿ ಸ್ಥಳದಲ್ಲೇ ಬೀಡು ಬಿಟ್ಟ ಮಗು ಕಳೆದುಕೊಂಡ ದುಃಖದಲ್ಲಿ ಆಕ್ರಂಧನ ಮುಗಿಲು ಮುಟ್ಟಿತ್ತು.