ಕೆರೆಗೆ ಬಿದ್ದು ಆಟೋ ಚಾಲಕ ಆತ್ಮಹತ್ಯೆ : ಯಡೂರು ಗ್ರಾಮದಲ್ಲಿ ಘಟನೆ

ಆಟೋ ಚಾಲಕನೋರ್ವ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುರುವಾರ ರಾತ್ರಿ ಯಡೂರು ಗ್ರಾಮದಲ್ಲಿ ನಡೆದಿದೆ.

ಮರಗೋಡು ಗ್ರಾಮ ನಿವಾಸಿ ಬೇಬಿ ಎಂಬವರ ಪುತ್ರ ನಿತಿನ್(26) ಮೃತ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಶುಕ್ರವಾರ ಅಗ್ನಿಶಾಮಕ ಠಾಣಾಧಿಕಾರಿ ಪಿ.ಎಸ್. ನಾಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಎನ್. ಲಕ್ಷ್ಮೀಕುಮಾರ್, ಪ್ರಕಾಶ್, ಚೇತನ್, ಸುದೀಪ, ಪ್ರೇಮ್‍ಕುಮಾರ್, ಎಲ್ಲಪ್ಪ ಯಡೂರು ಕೆರೆಯಲ್ಲಿ ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರ ತೆಗೆದರು.

error: Content is protected !!