fbpx

ಕೂರ್ಗ್ ಕಾಫಿ ಫ್ಲವರ್ ರೆಸಾರ್ಟ್ ಮೇಲೆ ಪೊಲೀಸ್ ದಾಳಿ

ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ತೊಂಡೂರು ರಸ್ತೆಯಲ್ಲಿರುವ ಉಪ್ಪುತೋಡುವಿನಲ್ಲಿರುವ ಕೂರ್ಗ್ ಕಾಫಿ ಫ್ಲವರ್ ರೆಸಾರ್ಟಿನಲ್ಲಿ ಜಿಲ್ಲಾಡಳಿತದ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರಿಗೆ ಆಶ್ರಯ ನೀಡಿರುವ ಬಗ್ಗೆ ಸೋಮವಾರಪೇಟೆ ತಾಲ್ಲೂಕು ತಹಶೀಲ್ಧಾರ್ ಗೋವಿಂದ್ ರಾಜ್ ಅವರ ನೇತೃತ್ವದಲ್ಲಿ ಅಧಿಕಾರಿಗಳು ಧಾಳಿ ನಡೆಸಿದ ಸಂದರ್ಭ ತಿಳಿದು ಬಂತು. ಗುರುವಾರ ರಾತ್ರಿ 7 ಗಂಟೆಯ ಸುಮಾರಿನಲ್ಲಿ ಈ ಘಟನೆ ನಡೆದಿದೆ.
ಮೈಸೂರಿನಿಂದ ಪ್ರವಾಸಿಗರಾಗಿ ಆಗಮಿಸಿದ್ದ 8 ಮಂದಿ ಈ ರೆಸಾರ್ಟಿನಲ್ಲಿ ವಾಸ್ತವ್ಯ ಹೂಡಿದ್ದರು ಎನ್ನಲಾಗಿದೆ.

ಕೊಡಗಿನಲ್ಲಿ ಕೊರೊನಾ ಸೋಂಕಿನ ಪಾಸಿಟಿವಿಟ್ ನಲ್ಲಿ ಏರುಪೇರು ಉಂಟಾಗಿರುವುದರಿಂದ ಹೊರಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರಿಗೆ ನಿರ್ಬಂಧ ಹೇರಿ ಕೊಡಗಿನ ಎಲ್ಲ ಜೋಂಸ್ಟೇ , ಲಾಡ್ಜ್ ಮತ್ತು ರೆಸಾರ್ಟ್ ಗಳನ್ನು ತೆರೆಯದಂತೆ ಜಿಲ್ಲಾಡಳಿತ ಸೂಚಿಸಿತ್ತು.
ಆದರೆ ಆದೇಶವನ್ನು ಉಲ್ಲಂಘಿಸಿದ ರೆಸಾರ್ಟ್ ಮಾಲೀಕರು ಪ್ರವಾಸಿಗರಿಗೆ ಆಶ್ರಯ ನೀಡಿದ್ದರಿಂದ ಅಧಿಕಾರಿಗಳು ಧಾಳಿ ನಡೆಸಿ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಬಂಧ ದೂರು ದಾಖಲಿಸಲಾಗಿದೆ.

ಹೋಂಸ್ಟೇ ದಾಳಿ

ಜಿಲ್ಲೆಯಲ್ಲಿ ಹೋಂಸ್ಟೇ ದಾಳಿ ಮುಂದುವರೆದಿದ್ದು ಕಡಗದಾಳುವಿನ ಜೋಸ್ಟಲ್ ಹೋಮ್ಸ್ ಕೂರ್ಗ್ ಹೋಂಸ್ಟೇ ಮೇಲೆ ಪ್ರವಾಸೋದ್ಯಮ ಇಲಾಖೆ, ಮಡಿಕೇರಿ‌ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ‌ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಳಿ ನಡೆಯುತ್ತಿದಂತೆ ಪ್ರವಾಸಿಗರನ್ನು ಮಾಲೀಕ ಹಿಂದಕ್ಕೆ ಕಳುಹಿಸಿದ್ದಾನೆ. ಹೀಗಾಗಿ ಕೊಡಗಿನತ್ತ ಬಂದ ಪ್ರವಾಸಿಗರು ಕುಶಾಲನಗರದಿಂದ ಹಿಂದಕ್ಕೆ ತೆರಳಿದ್ದಾರೆ. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!