fbpx

ಕೂಡ್ಲೂರಿನಲ್ಲಿ ಚೌಡಮ್ಮ ದೇವಿ ಉತ್ಸವ ಸಂಭ್ರಮ

ಕುಶಾಲನಗರದ ಕೂಡ್ಲೂರಿನ ಚೌಡಮ್ಮ ಸನ್ನಿಧಿಯಲ್ಲಿ ಉತ್ಸವ ಸಂಭ್ರಮ.ಗ್ರಾಮದ ಚೌಡಯ್ಯ ಮತ್ತು ಕಾಳಮ್ಮ ದಂಪತಿಗಳ ಕುಟುಂಬಸ್ಥರು ಪ್ರಾಚೀನ ಕಾಲದ ಆಲದ ಮರದ ಬುಡದಲ್ಲಿ ಚೌಡಮ್ಮ ತಾಯಿಯನ್ನು ಪ್ರತಿಷ್ಠಾಪಿಸಿ ಪೂಜೆ ಕೈಂಕರ್ಯ ನಡೆಸಲಾಗುತ್ತದೆ.

ಎರಡು ದಿನಗಳ ಉತ್ಸವದಲ್ಲಿ ಮೊದಲ ದಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ತಡರಾತ್ರಿ ಉತ್ಸವ ಮೂರ್ತಿಯನ್ನು ಈ ಕ್ಷೇತ್ರಕ್ಕೆ ತರಲಾಗುತ್ತದೆ. ಎರಡನೇ ದಿನ ಮರದ ಆವರಣದಲ್ಲೇ ದೇವಿಯನ್ನು ಪ್ರತಿಷ್ಠಾಪಿಸಿ ಸುತ್ತಮುತ್ತಲಿನ ಪ್ರದೇಶದಿಂದ ಆಗಮಿಸುವ ಭಕ್ತರು ಸ್ವತಃ ಪೂಜೆ ಸಲ್ಲಿಸುತ್ತಾರೆ. ಬಳಿಕ ಎರಡನೇ ದಿನ ಮಧ್ಯಾಹ್ನ ಮಾಂಸದ ಎಡೆ ಇಟ್ಟು ಭಕ್ತರಿಗೆ ಅನ್ನಧಾನ ನಡೆಸಲಾಗುವುದು.

error: Content is protected !!