ಕೂಡುಮಂಗಳೂರು ಪ್ರೌಢಶಾಲೆಯಲ್ಲಿ ಪರಿಸರ ಕಾರ್ಯಕ್ರಮ : ಗಿಡನೆಟ್ಟು ಬೆಳೆಸಲು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ(ಜೆಡಿಪಿಐ ) ಭಾರತಿ ಕರೆ

ಪ್ರತಿಯೊಬ್ಬರೂ ಪ್ರಕೃತಿಗೆ ಸೊಬಗು ನೀಡುವ ದಿಸೆಯಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರ ಕಾಪಾಡಬೇಕು ಎಂದುG ಸಾರ್ವಜನಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕಿ( ಜೆಡಿಪಿಐ) ಭಾರತಿ ಬುಧವಾರ ಹೇಳಿದರು.

ಕುಶಾಲನಗರ ಸಮೀಪದ ಕೂಡ್ಲೂರು ಗ್ರಾಮದಲ್ಲಿರುವ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್, ಎಸ್.ಡಿ.ಎಂ.ಸಿ, ಎನ್.ಎಸ್.ಎಸ್.ಘಟಕದ ವತಿಯಿಂದ ಬುಧವಾರ ( ಸೆ.15 ರಂದು) ರಾಷ್ಟ್ರೀಯ ಎಂಜಿನಿಯರ್ ದಿನ, ಶಾಲಾ ಸಂಪೋಷಣಾ ಅಭಿಯಾನ ಹಾಗೂ ಓಝೋನ್ ಪದರ ಸಂರಕ್ಷಣೆಯ ಪೂರ್ವಾಂದೋಲನ ಜಾಗೃತಿ ಅಭಿಯಾನದ ಅಂಗವಾಗಿ ಶಾಲಾವರಣದಲ್ಲಿ ಗಿಡ ನೆಡುವ ಮೂಲಕ ಪರಿಸರ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, ‘ಅಂತರ್ಜಲ ಸಂರಕ್ಷಿಸಿ: ಗಿಡ ಮರಗಳನ್ನು ನೆಡುವುದಲ್ಲದೆ ಪರಿಸರವನ್ನು ಸಂರಕ್ಷಿಸಬೇಕು ಎಂದರು.

ತಾಪಮಾನದ ಏರಿಕೆ ತಡೆಯುವ ನಿಟ್ಟಿನಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರವಾಪಾಡೋಣ ಎಂದರು.
ಶಿಕ್ಷಕರು ಮಕ್ಕಳಿಗೆ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ಬದುಕು ಮತ್ತು ಸಾಧನೆ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಪರಿಸರ ಸ್ವಚ್ಛತೆ , ನೈರ್ಮಲ್ಯೀಕರಣ ಹಾಗೂ ಮಕ್ಕಳ ಆರೋಗ್ಯ ಸುರಕ್ಷತೆ ಹೆಚ್ಚಿನ ಗಮನಹರಿಸಬೇಕು ಎಂದು ಭಾರತಿ ಹೇಳಿದರು.

ವಿರಾಜಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾತನಾಡಿ, ಶಾಲಾವರಣದಲ್ಲಿ ಹಣ್ಣಿನ ಮತ್ತು ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಶಾಲೆಯಲ್ಲಿ ಇಕೋ ಕ್ಲಬ್ ಮತ್ತು ಎನ್.ಎಸ್.ಎಸ್. ಘಟಕದ ಮೂಲಕ ವಿವಿಧ ಪರಿಸರಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲಾಗುತ್ತಿದೆ ಎಂದರು.

ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ವಿ.ಸುರೇಶ್, ಮೈಸೂರು ಜಿಲ್ಲೆಯ ವಿಷಯ ಪರಿವೀಕ್ಷಕಿ ಶೋಭಾ, ಇಕೋ ಕ್ಲಬ್ ಸಂಚಾಲಕಿ ಬಿ.ಡಿ.ರಮ್ಯ,, ಎನ್ನೆಸ್ಸೆಸ್ ಅಧಿಕಾರಿ ಡಿ.ರಮೇಶ್, ಶಿಕ್ಷಕರಾದ ದಯಾನಂದ ಪ್ರಕಾಶ್, ಕೆ.ಗೋಪಾಲಕೃಷ್ಣ, ಅನಿತಾ, ಅನ್ಸಿಲಾ ರೇಖಾ, ಎಸ್.ಎಂ.ಗೀತಾ ಇದ್ದರು.

error: Content is protected !!