ಕುಸಿದು ಬಿದ್ದಿರುವ ನೀರು ಸರಬರಾಜು ಪಂಪ್ ಹೌಸ್

ಶಾಸಕ ಅಪ್ಪಚ್ಚುರಂಜನ್ ಅವರಿಂದ ಶೀಘ್ರ ಸಮಸ್ಯೆ ಪರಿಹರಿಸುವ ಭರವಸೆ

ಕೊಡ್ಲಿಪೇಟೆ: ಸಮೀಪದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹೇಮಾವತಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ಪಂಪ್ ಹೌಸ್ ನಿರ್ವಹಣಾ ಕೊರತೆಯಿಂದ ಕುಸಿದು ಬಿದ್ದಿದ್ದು ಜನತೆ 12 ದಿನಗಳಿಂದ ನೀರಿಗಾಗಿ

ಪರದಾಡುವಂತಾಗಿದೆ.ಪಂಪ್ ಹೌಸ್ ಅನ್ನು ತುರ್ತಾಗಿ ದುರಸ್ತಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. 1980ರಲ್ಲಿ ಹೇಮಾವತಿ ನದಿಯಿಂದ ನೀರು ಸರಬರಾಜು ಮಾಡಲು ಮೇಜರ್ ನೀರು ಸರಬರಾಜು ಘಟಕ ನಿರ್ಮಾಣಕ್ಕೆ ಶಂಕು

ಸ್ಥಾಪನೆ ಮಾಡಿದ್ದು 1983ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಉದ್ಘಾಟಿಸಿದ್ದರು. 1 ಆರಂಭದಲ್ಲಿ ಘಟಕಕ್ಕೆ 17.5 ಎಚ್.ಪಿ.ಮೋಟಾರ್ ಅಳವಡಿಸಿ ಹೇಮಾವತಿ ನದಿಯಿಂದ ಗ್ರಾಮ ಪಂಚಾಯಿತಿ ಸಮೀಪದ ನೀರು ಶೇಖರಣಾ ಘಟಕಕ್ಕೆ ಸರಬರಾಜು ಮಾಡಲು 6 ಇಂಚು ಕ್ಯಾಸಿನೋ ವೈನ್ ಅಳವಡಿಸಲಾಗಿತ್ತು ನೀರಿನ ಬೇಡಿಕೆ ಹೆಚ್ಚಾದ ಹಿನ್ನಲೆ

1995ರಲ್ಲಿ 50 ಎಚ್‌.ಪಿ.ಯ ಹೊಸ ಮೋಟಾರ್ ಅಳವಡಿಸಲಾಯಿತು. 2010ರಲ್ಲಿ ಹಳೆಯ ವೈವ್ ಬದಲಾಯಿಸಿ 12 ఇంజినే నలో ಪೈಪ್ ಅಳವಡಿಸಿದರು. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರೂ ನದಿಯಿಂದ ನೀರು ಸಂಗ್ರಹಿಸಿ ಸರಬರಾಜು ಮಾಡಲು ಪಕ್ಕದಲ್ಲಿ ನಿರ್ಮಿಸಿದ್ದ ಪಂಪ್ ಹೌಸ್ ಅನ್ನು ನಿರ್ವಹಣೆ ಮಾಡದೇ ಸುಸ್ಥಿತಿಯಲ್ಲಿಡದ ಕಾರಣ ಇದೀಗ ಕುಸಿದು ಪಂಪ್ ಹೌಸ್ ದುರಸ್ಥಿಗೆ ರೂ 1 ಕೋಟಿ ವೆಚ್ಚ ತಗುಲಬಹುದು ಎಂದು ಅಧಿಕಾರಿಗಳು ತಿಳಿಸಿದ್ದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾಗಿ ಬರುವ ನೂತನ ಜನಪ್ರತಿನಿಧಿಗಳಿಗೆ ಕೊಡ್ಲಿಪೇಟೆ ಜನತೆಗೆ ನೀರು ಸರಬರಾಜು ಯೋಜನೆ ಸವಾಲಾಗಿ ಪರಿಣಮಿಸಬಹುದು ಎಂದು ನಾಗರಿಕ ಸಮಿತಿ ಕಾರ್ಯದರ್ಶಿ ಜಿ.ಆರ್.ಸುಬ್ರಹ್ಮಣ್ಯ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಹಾಗೂ ಕರವೇ ಹೋಬಳಿ ಅಧ್ಯಕ್ಷ ಭೂಪಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಚಾರ ತಿಳಿದು ಶಾಸಕ ಎಂ ಪಿ ಅಪ್ಪಚ್ಚುರಂಜನ್ ಅವರು ಗುರುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಾವೇರಿ ನೀರು ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಅವರೊಂದಿಗೆ ಸಮಾಲೋಚನೆ ನಡೆಸಿದ್ದು ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸುವ ಭರವಸೆ ನೀಡಿರುತ್ತಾರೆ. • ಕೊಡ್ಲಿಪೇಟೆ ವೆಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಕಾವೇರಿ ನೀರು ನಿಗಮ ಹಾಗೂ ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ಅವರೊಂದಿಗೆ ಸಮಾಲೋಚನೆ ನಡೆಸಿರುವೆ ಶೀಘ್ರ ಕಾರ್ಯಾರಂಭ ಮಾಡುತ್ತಾರೆ.”

error: Content is protected !!