ಕುಶಾಲನಗರ ವ್ಯಾಪ್ತಿಯ ರೈತರು ಭತ್ತದ ನಾಟಿ ಬ್ಯುಸಿ

ಹಾರಂಗಿ ಜಲಾಶಯದ ಅಚ್ಚುಕಟ್ಟು ವ್ಯಾಪ್ತಿಯ ಶ್ರೀರಂಗಾಲ, ತೊರೆನೂರು ,ಹೆಬ್ಬಾಲೆ ಗ್ರಾಮಗಳಲ್ಲಿ ಈ ಬಾರಿಯ ಖಾರಿಫ್ ಭತ್ತದ ಬೆಳೆಯ ನಾಟಿ ಚುರುಕುಗೊಂಡಿದೆ.

ಭತ್ತದ ಬೀಜದ ಬಿತ್ತನೆ ಮಾಡಿದ ಒಂದು ತಿಂಗಳ ಒಳಗಾಗಿ ಸಿದ್ದಗೊಳ್ಳುವ ಸಸಿ ಮಡಿ (ಪೈರು) ಸಸಿ ನಾಟಿ ಮಾಡುವಲ್ಲಿ ತೊಡಗಿದ್ದಾರೆ.

ಕಾರ್ಮಿಕರ ಕೊರತೆಯಿಂದ ನಡುವೆಯೂ ಸಂಕಷ್ಟದಲ್ಲಿದ್ದ ರೈತ ಆದಾಯಕ್ಕಿಂತ ದುಪ್ಪಟ್ಟು ವೆಚ್ಚ ತಗಲುವ ಹಿನ್ನೆಲೆಯಲ್ಲಿ ಬಹುತೇಕ ರೈತರು ತಾವೇ ಬಿಟ್ಟುಬಿಡದ ಮಳೆಗೆ ಕೃಷಿ ಮಾಡುತ್ತಿದ್ದಾರೆ.

ಒಂದು ಏಕರೆ ಜಮೀನಿನಲ್ಲಿ ಗೊಬ್ಬರ ಮತ್ತು ಇತರೆ ಸಂಕಷ್ಟದ ನಡುವಿನ ನಡುವೆ ಹಣ ಖರ್ಚು ಮಾಡಿ ಬೆಳೆಯುವ ಫಸಲು ಏಕರೆಯೊಂದಕ್ಕೆ 20 ಕ್ವಿಂಟಾಲ್ ಬಂದರೆ ಅದು ನಮ್ಮ ಅದೃಷ್ಟ ಎಂದು ಕೃಷಿಕರು ಹೇಳುತ್ತಾರೆ.

error: Content is protected !!