ಕುಶಾಲನಗರ ವ್ಯಾಪ್ತಿಯಲ್ಲಿನ ಕಾವೇರಿ ನದಿಯಲ್ಲಿ ಅಕ್ರಮ ಮಹಶೀರ್ ಮೀನಿನ ಬೇಟೆ

ಕಾವೇರಿ ನದಿಯಲ್ಲಿ ಅಳಿವಿನಂಚಿನಲ್ಲಿ ಇರುವ ಮಹಶೀರ್ ಮೀನು ಕುಶಾಲನಗರ ತಾಲ್ಲೂಕಿನ ವ್ಯಾಪ್ತಿಯಲ್ಲಿನ ನೆಲ್ಲಿಹುದಿಕೇರಿಯಿಂದ ಶ್ರೀರಂಗಾಲದವರೆಗೆ ಸದ್ದಿಲ್ಲದೆ ಬೆಸ್ತರ ಬಲೆಗೆ ಬೀಳುತ್ತಿದೆ.

ಇಲ್ಲಿನ ಅರೆಕಾಡುವಿನಲ್ಲಿ ಅಂದಾಜು 30 ಮಂದಿ ಸದ್ದಿಲ್ಲದೆ,ಬಲೆ ತೆಪ್ಪದೊಂದಿಗೆ ಬೀಡುಬಿಟ್ಟಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿ ಮೀನುಗಾರಿಕೆ ಇಲಾಖೆ ನದಿಗೆ ಬಿಡಲಾಗಿರುವ ಮೀನುಮರಿಗಳು ಇದೀಗ ಬಲಿತಿದ್ದು, ನದಿಯಲ್ಲಿ ನೀರು ಕಡಿಮೆಯಾದ ಹಿನ್ನಲೆ ಅಕ್ರಮ ಮೀನು ಬೇಟೆ ಜೋರಾಗಿ ನಡೆಯುತ್ತಿದೆ.

ರಾಜ್ಯದ ಏಕೈಕ ಮಹಶೀರ್ ಮರಿಗಳ ಉತ್ಪನ್ನ ಕೇಂದ್ರ ಹಾರಂಗಿ ಜಲಾಶಯದ ಕೇಂದ್ರದಿಂದ ಪ್ರತೀ ವರ್ಷ 35 ಸಾವಿರ ಮರಿಯನ್ನು ಉತ್ಪಾಧಿಸಿ ನದಿಗೆ ಬಿಡಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಮೀನುಗಾರಿಕೆ ಸಚಿವ ಅಂಗಾರರವರಿಗೆ ದೂರು ನೀಡಿದ್ದು, ಅಕ್ರಮ ಮೀನುಗಾರಿಕೆ ತಡೆಗೆ ಕ್ರಮ ವಹಿಸುವ ಭರವಸೆ ನೀಡಿದ್ದರು, ಆದರೆ ಮೀನು ಬೇಟೆ ಮಾತ್ರ ಎಗ್ಗಿಲ್ಲದೆ ಸಾಗಿದೆ.

ಈ ಸಂಬಂಧ ಮೀನುಗಾರಿಕ ಇಲಾಖೆಯ ಅಧಿಕಾರಿಗಳು ಬೆಸ್ತರಿಗೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಉತ್ಪಾಧನೆ ಮಾಡುತ್ತಿದ್ದು ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟುಮಾಡಲಾಗುತ್ತಿದೆ.

error: Content is protected !!