ಕುಶಾಲನಗರ ಗಣಪತಿ ದೇವಾಲಯಕ್ಕೆ ಹರಿದು ಬಂದ ಜನ ಸಾಗರ

ವಿಜ್ಞ ನಿವಾರಕ,ವಿಜಯ ವಿನಾಯಕ, ಗೌರಿಪುತ್ರ,ಏಕದಂತ,ಶಣ್ಮುಗಮೂರ್ತಿ,ಹೀಗೆ ಹತ್ತು ಹಲವು ಹೆಸರಿನಿಂದ ಕರೆಸಿಕೊಳ್ಳುವ ಗಣಪನ ಆರಾಧನೆ ದಿನವಾದ ಇಂದು ಕುಶಾಲನಗರದ ಹೃದಯಭಾಗದಲ್ಲಿರುವ ಗಣೇಶನ ದೇವಾಲಯಕ್ಕೆ ಭಕ್ತ ಸಾಗರವೇ ಹರಿದು ಬಂದಿತ್ತು.

ಬೆಳಗಿನಂದಲೇ ಪೂಜೆ ಕೈಂಕರ್ಯ ಆರಂಭವಾಗಿದ್ದು 9 ಗಂಟೆಗೆ ಮಹಾಪೂಜೆ ನೆರವೇರಿತು. ಸರತಿ ಸಾಲಿನಲ್ಲಿ ನಿಂತು ವಿನಾಯಕನ ಬಳಿ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಳನ್ನು ಬೇಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಭಕ್ತರು ದೇವರ ಕೃಪೆಗೆ ಪಾತ್ರರಾಗಿ ಪ್ರಸಾದ ಸ್ವೀಕರಿಸಿದರು. ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ಹೆಣ್ಣುಮಕ್ಕಳಿಗೆ ಪ್ರತ್ಯೇಕ ಕೌಂಟರ್ ಮೂಲಕ ವಿತರಿಸಲಾಗುತ್ತಿತು,ಇಡೀ ದಿನ ಇದೇ ರೀತಿಯ ಜನರಾಗಿ ಈ ದೇವಾಲಯದಲ್ಲಿ ಇರಲಿದೆ.

error: Content is protected !!