fbpx

ಕುಶಾಲನಗರದ ಹಲವೆಡೆ ಕುಡಿವ ನೀರಿಗೆ ನೀರೆಯರ ಪರದಾಟ!

ಕುಶಾಲನಗರ: ಇಡೀ ಊರಿನ ಸುತ್ತ ಕಾವೇರಿ ತನ್ನ ಪ್ರಲಾಪ ತೋರಿದ್ದಾಳೆ. ಕೊಡಗಿನಲ್ಲಿ ಈ ಭಾರೀ ಪ್ರವಾಹದ ಪರಿಸ್ಥಿತಿ ಇದ್ದು, ದಾಖಲೆಯ ಮಳೆಯಾಗಿದೆ. ಆದರೂ ಜನ ನೀರಿಗೆ ಪರದಾಡುತ್ತಿದ್ದಾರೆ!

ನಿಜ ಕುಶಾಲನಗರದ ಕಾವೇರಿ ನದಿಯ ದಂಡೆಯಲ್ಲಿರುವ ಜಲಮಂಡಳಿಯ ನೀರೆತ್ತುವ ಯಂತ್ರಾಗಾರ ಜಲಾವೃತವಾಗಿರುವುದರಿಂದ ನೀರೆತ್ತಿ ನಿವಾಸಿಗಳಿಗೆ ಪೂರೈಸಲು ಪ್ರವಾಹ ಇಳಿಯಲೇಬೇಕಂತೆ. ಇನ್ನೆರಡು ದಿನದಲ್ಲಿ ಸರಿ ಹೋಗಬಹುದು ಎಂದು ಅಧಿಕಾರಿಕಳು ಕಣಿ ಹೇಳುತ್ತಿದ್ದಾರೆ.

ಸಾರ್ವಜನಿಕರು ಸಹಕರಿಸಬೇಕೆಂದು ಜಲಮಂಡಳಿ ಅಧಿಕಾರಿಗಳು ಮನವಿ ಮಾಡುತ್ತಿದ್ದಾರೆ. ಆದಾಗ್ಯೂ ಟ್ರಾಕ್ಟರ್ ಮೂಲಕವಾದರೂ, ಸ್ಥಳೀಯ ಪಂಚಾಯತಿ ಆಡಳಿತ ಅಥವಾ ಆಯಾಯ ವಾರ್ಡ್ ಗಳ ಚುನಾಯಿತ ಸದಸ್ಯರು ಕನಿಷ್ಠ ಕುಡಿವ ನೀರನ್ನಾದರೂ ಮನೆ ಮನೆಗಳಿಗೆ ಪೂರೈಸಿಕೊಡುವ ಕೆಲಸ ಮಾಡಬಹುದಾಗಿದೆ. ಆದರೆ ಅದಕ್ಕೆ ಮುಂದಾಗದ ಅಧಿಕಾರಿ ಹಾಗು ರಾಜಕೀಯ ವ್ಯವಸ್ಥೆ ಜಾಣ ಕುರುಡುತನಕ್ಕೆ ಒಳಗಾಗಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭು ಎಂದು ಇದೆಯಾದರೂ ಜನರ ಪಾಡು ಹೀಗೆ ಹೀನಾಯವಾಗಿಯೇ ಉಳಿದಿರುವುದು ವಿಪರ್ಯಾಸ. ಮತ ಪಡೆದವರು ಮನುಜ ಮತಕ್ಕೆ ಯಾವ ಕರುಣೆಯನ್ನೂ ಗೆದ್ದು ಗದ್ದುಗೆ ಏರಿದ ಮೇಲೆ ತೋರಿಸುತ್ತಿಲ್ಲ ಎಂಬಿದು ನಮ್ಮ ವ್ಯವಸ್ಥೆಯ ಕಠೋರ ಕಹಿ ಸತ್ಯವೇ ಆಗಿದೆ!

error: Content is protected !!