ಕುಶಾಲನಗರದ ಸಂತೆ ಸ್ಥಳಾಂತರಕ್ಕೆ ಸಾರ್ವಜನಿಕರ ಒತ್ತಾಯ

ಹಲವು ದಶಕಗಳಿಂದ ಹಾಸನ-ಕುಶಾಲನಗರ ಪಟ್ಟಣ-ಮೈಸೂರು ಬೈಪಾಸ್ ರಸ್ತೆಯಲ್ಲಿ ರುವ ಮಾರುಕಟ್ಟೆಯಲ್ಲಿ ನಡೆಯುತ್ತಿದ್ದ ಸಂತೆ ಇದೀಗ ಮೈಸೂರು ಮಡಿಕೇರಿ ರಸ್ತೆಯಲ್ಲಿನ ಕುಶಾಲನಗರದ ಎಪಿಎಂಸಿ ಗೆ ಕೋವಿಡ್ ಸಂದರ್ಭ ಸ್ಥಳಾಂತರ ಗೊಂಡಿದ್ದು, ಇಂದಿಗೂ ಮಂಗಳವಾರದ ಸಂತೆ ನಡೆಯುತ್ತಿರುವುದು ಸಾರ್ವಜನಿಕರಿಗೆ ಸಾಕಷ್ಟು ಕಿರಿಕಿರಿ ಉಂಟಾಗಿದೆ, ಇದಕ್ಕೆ ಮುಖ್ಯ ಕಾರಣ ಪಟ್ಟಣ ಪ್ರದೇಶದಿಂದ ಸಾಕಷ್ಟು ದೂರ,ವಾಹನ ನಿಲುಗಡೆ,ಮತ್ತು ಇಕ್ಕಟ್ಟಿನ ಮಳಿಗೆಗಳು.
ಪಟ್ಟಣದ ನಿವಾಸಿಗಳು ಈ ಹಿಂದೆ ಇದ್ದ ಮಾರುಕಟ್ಟೆಗೆ ಕಾಲ್ನಡಿಗೆ ಯಿಂದ ಬಂದು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಬಹುದಾಗಿತ್ತು, ಇದೀಗ ಸಾಮಾನ್ಯ ಜನ ಮಾರುಕಟ್ಟೆಗೆ ಬರಬೇಕಾದರೆ ಆಟೋರಿಕ್ಷಕ್ಕೆ ಹೋಗಿ ಬರಲು 100 ರುಪಾಯಿ ಮೀಸಲಿಡಬೇಕು ಅನಿವಾರ್ಯತೆ ಇದೆ. ಇನ್ನು ಸ್ವಂತ ವಾಹನದಲ್ಲಿ ಬರುವವರಲ್ಲಿ ದ್ವಿಚಕ್ರ ವಾಹನಗಳು ನಿಲ್ಲಿಸಲು ಸ್ಥಳಾವಕಾಶ ಸಿಕ್ಕಿದರೂ ಪಾರ್ಕಿಂಗ್ ವ್ಯವಸ್ಥೆ ಇಲ್ಲ,ಕಾರು ಜೀಪಿನಲ್ಲಿ ಬಂದರಂತೂ ಮುಖ್ಯ ರಸ್ತೆಯಲ್ಲಿ ನಿಲೂಲಿಸಬೇಕಾದ ಅನಿವಾರ್ಯತೆ ಇದೆ.
ಇದೀಗ ಎಪಿಎಂಸಿ ಯಲ್ಲಿ ಸಿಗುವ ತರಕಾರಿ ದುಬಾರಿಯಾಗಿದೆ ಎನ್ನುವ ಆರೋಪಗಳೂ ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಮನೆ ಬಾಗಿಲಿಗೆ ಬರುವ ತಳ್ಳುವ ಗಾಡಿಯಲ್ಲೇ ಖರೀದಿಸುವುದು ಉತ್ತಮ ಎನ್ನವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಹಳೆಯ ಸಂತೆ ಮಾರುಕಟ್ಟೆ ವಿಶಾಲವಾಗಿದ್ದು, ಇದರ ಅಭಿವೃದ್ದಿಗೆ 5 ಕೋಟಿ ವೆಚ್ಚದಲ್ಲಿ ಮಾಂಸ ಮಳಿಗೆ ಸೇರಿದಂತೆ, ತರಕಾರಿ ಹಣ್ಣು ಮಾರಾಟ ಮಾಡುವವರಿಗೆ ಯೋಗ್ಯ ಸ್ಥಳವಕಾಶವಿತ್ತು, ಇದೀಗ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಹಿಂದಿನ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಒತ್ತಾಯ ಮಾಡುತ್ತಿದ್ದಾರೆ.