fbpx

ಕುಶಾಲನಗರದ ಬಿಜೆಪಿ ಪದಾಧಿಕಾರಿಗಳ ಆಯ್ಕೆ ನಡೆಯಿತು

ಭಾರತೀಯ ಜನತಾ ಪಾರ್ಟಿ ಯ ಕುಶಾಲನಗರ ಸ್ಥಾನೀಯ ಸಮಿತಿಯ ನೂತನ ಪದಾಧಿಕಾರಿಗಳನ್ನು ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರಾದ ಮನು ಕುಮಾರ್ ರೈ ಯವರ ಅಧ್ಯಕ್ಷತೆಯಲ್ಲಿ ಹಲವು ಮುಖಂಡರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು.

ನಗರದ ಬಿಜೆಪಿ ಪ್ರಮುಖ್ ಆಗಿ ವಿ.ಎನ್.ಉಮಶಂಕರ್ ,ಸಹ ಪ್ರಮುಖ್ ಆಗಿ ಹೆಚ್.ಡಿ.ಶಿವಾಜಿ, ನಗರದ ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷರಾಗಿ ಡಿ.ಕೆ.ಚಂದ್ರಶೇಖರ್, ಬಿಜೆಪಿ ಪರಿಶಿಷ್ಟ ಜಾತಿಯ ಅಧ್ಯಕ್ಷರಾಗಿ ಚನ್ನಯ್ಯ, ಬಿಜೆಪಿ ಪರಿಶಿಷ್ಟ ಪಂಗಡದ ಅಧ್ಯಕ್ಷರಾಗಿ ಚಂದ್ರ ಶೇಖರ್, ಶಕ್ತಿ ಕೇಂದ್ರದ ಪ್ರಮುಖ್ ಆಗಿ ಪ್ರವೀಣ್ ಕುಮಾರ್ ಮತ್ತು ಶಿವಕುಮಾರ್ ಹಾಗೂ ನಗರ ಯುವ ಮೋರ್ಚದ ಅಧ್ಯಕ್ಷರಾಗಿ ಸುಮನ್ ರವರನ್ನು ಆಯ್ಕೆ ಮಾಡಿ ಪಾರ್ಟಿಯ ಸೇವೆ ಮಾಡಲು ಅವಕಾಶ ನೀಡಲಾಗಿದೆ.

error: Content is protected !!