fbpx

ಕುಶಾಲನಗರದ ಗ್ರಾಮ ಮಟ್ಟದಲ್ಲಿಯೂ ಏಕ ಬಳಕೆ ಪ್ಲಾಸ್ಟಿಕ್ ವಶ

ಜಿಲ್ಲೆಯ ನಗರ, ಪಟ್ಟಣ ಸೇರಿದಂತೆ ಗ್ರಾ.ಪಂ. ಮಟ್ಟದಲ್ಲಿಯೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಸಂಬಂಧ ಕುಶಾಲನಗರ ಹೊರವಲಯದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ, ಮುಳ್ಳುಸೋಗೆ ಗ್ರಾಮದ ದಿನಸಿ ಅಂಗಡಿ, ಮಾಂಸ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ಪರಿಶೀಲಿಸಲಾಯಿತು.

ಈ ಸಂದರ್ಭ ಒಟ್ಟು ಅಂದಾಜು ಅರ್ಧ ಕೆಜಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಳ್ಳಲಾಯಿತು ಹಾಗೂ 1200 ರೂ. ಗಳನ್ನು ದಂಡ ರೂಪದಲ್ಲಿ ವಸೂಲಿ ಮಾಡಿ, ಏಕಬಳಕೆಯ ನಿಷೇಧಿತ ಪ್ಲಾಸ್ಟಿಕ್ ಕವರ್ ಬಳಸದಂತೆ ತಿಳುವಳಿಕೆ ನೀಡಲಾಯಿತು.

error: Content is protected !!