fbpx

ಕುಶಾಲನಗರದಲ್ಲೊಬ್ಬ ಯುವ ಡಿಜೆ

ಈತನಿಗೆ ಇದೀಗ ಕೇವಲ 22 ವರ್ಷ, ಈ ಸಣ್ಣ ವಯಸ್ಸಿನಲ್ಲೇ ಪಾಶ್ಚಿಮಾತ್ಯ (ವೆಸ್ಟರ್ನ್) ಹಾಡು ರಚನೆ ಮಾಡಿ ಸಾಧನೆ ಮಾಡುತ್ತಿದ್ದಾನೆ. ಹೌದು ಈ ಯುವಕನ ಹೆಸರು ಗಿಡೀಯಾನ್ ವಾಲ್ಕರ್, ಮೂಲತಃ ಕೊಡಗಿನ ಕುಶಾಲನಗರದವನು.ಯಾವುದೇ ಕಾಪಿ ರೈಟ್ ಮಾಡದೆ 97 ದೇಶಗಳಲ್ಲಿ ತನ್ನ ಸಂಗೀತದ ಮೂಲಕ ಪ್ರಚಲಿತ ಗೊಂಡಿದ್ದಾನೆ.

2021 ಬಿಲ್ಬೋರ್ಡ್ ಸಾಧನೆ ಮಾಡಿದ್ದಾನೆ ತನ್ನ “ಬ್ಲೂಸ್” ಹೆಸರಿನ ಸಂಗೀತ ಮಿಲಿಯನ್ ಗಟ್ಟಲೆ ಯೂಟೂಬ್ ನಲ್ಲಿ ವೀಕ್ಷಕರು ಗಮನಿಸಿದ್ದಾರೆ, ಇದರಲ್ಲಿ ಸೌಂಡ್ ಐಟೂನ್ಸ್ ಅಮೇಜನ್ ಮತ್ತು ಗೂಗಲ್ ವಿಶೇಷದಲ್ಲಿ ಪಡೆಯಬಹುದಾಗಿದ್ದು, ಉತ್ತಮ ಸಂಗೀತ ಪ್ರಶಸ್ತಿಗೆ ಪಾತ್ರವಾಗಿದೆ.

ಇದೀಗ “ರೊಜಾರಿಯೋ” ದಾಖಲೆ ಮಾಡಿದ್ದು 2 ಲಕ್ಷ ವೀಕ್ಷಣೆ ಮಾಡಿದ್ದು “ಟೆರಿಫೈಡ್” 9XM ಮತ್ತು VH1 ಮ್ಯೂಸಿಕ್ ಚಾನಲ್ ಗಳಲ್ಲಿ ಪ್ರಸಾರವಾಗಿದೆ ಅಲ್ಲದೆ ಮಿಲಿಯನ್ ಗಟ್ಟಲೆ ಸ್ಟ್ರೀಮಿಂಗ್ ನಡೆದಿದೆ.

error: Content is protected !!