fbpx

ಕುಶಾಲನಗರದಲ್ಲಿ ವೀಕೆಂಡ್ ಕರ್ಪ್ಯೂ ಉಲ್ಲಂಘನೆ

ಕುಶಾಲನಗರ: ಅಗತ್ಯವಲ್ಲದ ಅಂಗಡಿ ಮಳಿಗೆಗಳು ‌ಓಪನ್ ಆಗಿದೆ. ಎಂದಿನಂತೆ ವ್ಯಾಪಾರ ನಡೆಸುತ್ತಿರುವ ಮೊಬೈಲ್ ಮಳಿಗೆಗಳು ಕುಲ್ಲಂಕುಲ್ಲ ಬಿಸಿಯಾಗಿದೆ.

ಶನಿವಾರದಂದೂ ತೆರೆದಿದ್ದ ಮೊಬೈಲ್ ಮಳಿಗೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ. ಕುಶಾಲನಗರ ಪಟ್ಟಣ ಪಂಚಾಯಿತಿಯಿಂದ ಮಳಿಗೆ ತೆರೆಯಲು ಗ್ರೀನ್ ಸಿಗ್ನಲ್ ನೀಡಿದೆ ಎನ್ನುತ್ತಿರುವ ಮೊಬೈಲ್ ವರ್ತಕರು ರಾಜಾರೋಷವಾಗಿ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಸರ್ಕಾರದ ನಿಯಮ ಉಲ್ಲಂಘನೆಯಾಗುತ್ತಿದ್ದರೂ, ಕಣ್ಣುಮುಚ್ಚಿ‌ ಇರುವ ಜಿಲ್ಲಾಡಳಿತ ಜಾಣ ಕುರುಡು ನೀತಿ ಅನುಸರಿಸುತ್ತಿದೆ. ಮೌನವಹಿಸಿರುವ ಪಟ್ಟಣ ಪಂಚಾಯಿತಿ, ಪೋಲೀಸ್ ಇಲಾಖೆ ಅಧಿಕಾರಿಗಳು ಕೂಡ ಜಾಣ ನಿದ್ರೆಗೆ ಜಾರಿದೆ. ಈ ನಡುವೆ ವೀಕೆಂಡ್ ಕರ್ಪ್ಯೂ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯವೂ ಜನರಿಂದ ಕೇಳಿ ಬರುತ್ತಿದೆ.

error: Content is protected !!