ಕುಶಾಲನಗರದಲ್ಲಿ ಕೆ.ಎಸ್.ಆರ್.ಪಿ ತುಕಡಿಯಿಂದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ

ಕಾಂಗ್ರೆಸ್ಸಿನ ಎಸ್ಪಿ ಕಛೇರಿಗೆ ಮುತ್ತಿಗೆ ಮತ್ತು ಬಿಜೆಪಿ ಜನಜಾಗೃತಿ ಸಮಾವೇಶದ ತಡೆಗೆ ಕೊಡಗಿನಲ್ಲಿ 144 ಸೆಕ್ಷನ್ ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಿರುವ ಬೆನ್ನಲ್ಲೇ ಕುಶಾಲನಗರದಲ್ಲಿ ಸುರಿಯುವ ಮಳೆಯ ನಡುವೆಯೂ ಕೆ ಎಸ್ ಆರ್ ಪಿ ತುಕಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಸಿತು.

ತಾವರೆಕೆರೆಯಿಂದ ಹೊರಟು, ಗಡಿ ಕೊಪ್ಪ ಗೇಟ್, ರಥ ಬೀದಿ ಸೇರಿದಂತೆ ಸೂಕ್ಷ್ಮ ಪ್ರದೇಶದಲ್ಲಿ ಎಡಜಿಪಿ ಅಲೋಕ್ ಕುಮಾರ್, ಐಜಿ ಮಧುಕರ್ ಪವಾರ್,ಎಸ್ಪಿ ಅಯ್ಯಪ್ಪ ಮಂದಾಳತ್ವದಲ್ಲಿ ನಡೆಯಿತು.

error: Content is protected !!