ಕುಶಾಲನಗರದಲ್ಲಿ ಅಕ್ರಮ ಗಾಂಜಾ ಮಾರಾಟ: ಐವರು ಆರೋಪಿಗಳ ಬಂಧನ

ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಗ್ರಾಮದ ಬಳಿ ಅಕ್ರಮವಾಗಿ ಗಾಂಜಾ ವಶದಲ್ಲಿಟ್ಟುಕೊಂಡು ಮಾರಟ ಮಾಡುತ್ತಿದ್ದ ಪ್ರಕರಣವನ್ನು ಕುಶಾಲನಗರ ಗ್ರಾಮಾಂತರ ಪೂಲೀಸರು ಪತ್ತೆ ಹಚ್ಚಿದ್ದು, ಐವರನ್ನು ವಶಕ್ಕೆ ಪಡೆಯಲಾಗಿದೆ.

ಬಸವನತ್ತೂರು ಗ್ರಾಮದ ಚೇತನ್, ಕೊಡುಮಂಗಳೂರಿನ ಕಿರಣ್ ಕುಮಾರ್,ಕೂಡಿಗೆಯ ಪ್ರವೀಣ್, ಸೂರ್ಯ ಮತ್ತು ಪ್ರತಾಪ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರಿಂದ 1 ಕೆ.ಜಿ 915 ಗ್ರಾಂ ಗಾಂಜಾ, ನಗದು ಹಣ,6 ಮೊಬೈಲ್ ಫೋನು, 4 ದ್ವಿಚಕ್ರ ವಾಹನ ಗಳನ್ನು ವಶಕ್ಕೆ ಪಡೆಯಲಾಗಿದೆ.

ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐಗಳಾದ ಚಂದ್ರಶೇಖರ್ ಮತ್ತು ಭಾರತಿ, ಎಎಸ್ಐ ಗಳಾದ ಗೋಪಾಲ್, ಕುಮಾರಿ ತಂಡದೊಂದಿಗೆ ಕಾರ್ಯಾಚರಣೆ ನಡೆಸಲಾಯಿತು.

error: Content is protected !!