fbpx

ಕುದುರೆಮುಖ ಇನ್ನು ಮುಂದೆ ಸೂಕ್ಷ್ಮ ಪರಿಸರ ವಲಯ

ನವದೆಹಲಿಃ ಹಲವು ವಾದವಿವಾದಗಳಿಂದ ವರ್ಷಗಳ ಬಳಿಕ ಇದೀಗ ಕುದುರೆಮುಖ ರಾಷ್ಟ್ರೀಯ ಉದ್ಯಾನವನ್ನು ಸೂಕ್ಷ್ಮ ಪರಿಸರ ವಲಯ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.ಇದರಿಂದ 316.67 ಚದರ ಕಿಲೋಮೀಟರ್ ವಿಸ್ತೀರ್ಣದ ಸಂರಕ್ಷಿತ ಪ್ರದೇಶ ಎಸ್ ಇ ಝಡ್ ವ್ಯಾಪ್ತಿಗೆ ಒಳಪಡಲಿದೆ.ಇದಲ್ಲದೆ ಎಸ್ ಇ ಝಡ್ ಗೆ ಸೇರ್ಪಡೆಗೊಂಡ ಚಿಕ್ಕಮಗಳೂರು,ದಕ್ಷಿಣ ಕನ್ನಡ ಮತ್ತು ಉಡುಪಿಯ 58 ಗ್ರಾಮಗಳು ಮತ್ತು 108 ರೆವಿನ್ಯೂ ಪ್ರದೇಶಗಳಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸುವ ಮತ್ತು ನಿಯಂತ್ರಿಸುವ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಸೋಮೇಶ್ವರ ವನ್ಯಜೀವಿ ಅಭಯಾರಣ್ಯಕ್ಕೆ ಹೊಂದಿಕೊಂಡಂತೆ ಎಸ್ ಇ ಝಡ್ ನ ರಾಷ್ಟ್ರೀಯ ಉದ್ಯಾನವನದ ಉತ್ತರ ಭಾಗದಲ್ಲಿ ಇದು ಬರಲಿದೆ.ಜುಲೈ 2 ರಂದು ಅಧಿಸೂಚನೆ ಹೊರಡಿಸಿದ್ದು. 108 ರೆವೆನ್ಯೂ ಪ್ರದೇಶಗಳು ಬೆಳ್ತಂಗಡಿ,ಶೃಂಗೇರಿ,ಕೊಪ್ಪ,ಮೂಡಿಗೆರೆ,ಕಾರ್ಕಳ ತಾಲ್ಲೂಕು ಒಳಗೊಂಡಿದೆ.

error: Content is protected !!