ಕುಡಿಯುವ ನೀರು ಬಿಲ್ ಬಾಕಿ ಮೊತ್ತ ಪಾವತಿಸಿ

ಕೊಡಗು ಜಿಲ್ಲೆಯ ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿ ಹಾಗೂ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾವೇರಿ ನದಿ ಮೂಲದಿಂದ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಯನ್ನು ಕರ್ನಾಟಕ ನಗರ ನೀರು ಸರಬರಾಜು ಒಳಚರಂಡಿ ಮಂಡಳಿ ವತಿಯಿಂದ ಮಾಡಲಾಗುತ್ತಿದ್ದು, ನಳ ಸಂಪರ್ಕದ ನೀರಿನ ಬಾಕಿ ಬಿಲ್ಲು ಮೊತ್ತವನ್ನು ಪಾವತಿ ಮಾಡದ ಗ್ರಾಹಕರು ತಮ್ಮ ನೀರಿನ ಬಿಲ್ ಬಾಕಿ ಮೊತ್ತವನ್ನು ಶೀಘ್ರದಲ್ಲಿ ಪಾವತಿ ಮಾಡಲು ಸೂಚಿಸಲಾಗಿದೆ. ಹಾಗೂ ಅನಧಿಕೃತ ನಳ ಸಂಪರ್ಕ ಹೊಂದಿರುವ ಗ್ರಾಹಕರು ಕಡ್ಡಾಯವಾಗಿ ತಮ್ಮ ನಳ ಸಂಪರ್ಕಗಳನ್ನು ಶೀಘ್ರದಲ್ಲಿ ಅಧಿಕೃತಗೊಳಿಸಲು ಸೂಚಿಸಲಾಗಿದೆ.

ಈ ನೀರು ಸರಬರಾಜು ನಿರ್ವಹಣೆಯಲ್ಲಿ ಗ್ರಾಹಕರು ಸುಲಭವಾಗಿ ಬಿಲ್ ಮೊತ್ತವನ್ನು ಪಾವತಿಸಲು ಆನ್‍ಲೈನ್ ಪೇಮೆಂಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಗ್ರಾಹಕರು http://ipaymyinvoice.com/k/abc ವೆಬ್‍ಸೈಟ್ ಲಿಂಕ್‍ನ್ನು ಬಳಸಿ ತಮ್ಮ ನೀರಿನ ಬಿಲ್ಲುಗಳನ್ನು ಪಾವತಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ತಿಳಿಸಿದ್ದಾರೆ.