fbpx

ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಬೆಲೆಬಾಳುವ ಕೋಟ್ಯಾಂತರ ರುಪಾಯಿ ಮೌಲ್ಯದ ಆಭರಣ ನಾಪತ್ತೆ

ಪುತ್ತೂರು:ರಾಜ್ಯದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಮಣ್ಯ ದೇವಾಯಲದಲ್ಲಿ ಕೋಟ್ಯಾಂತರ ಮೌಲ್ಯದ ಆಭರಣಗಳು ಮತ್ತು ಪುರಾತನ ವಿಗ್ರಹಗಳು ನಾಪತ್ತೆಯಾಗಿದೆ.ದೇವಾಲಯದ ಗರ್ಭಗುಡಿಯಲ್ಲಿದ್ದ ವಜ್ರದ ಕಂಠಿಹಾರ,ಆಭರಣಗಳು,ಸತ್ಯನಾರಾಯಣ ದೇವರ ಬೆಳ್ಳಿಯ ಫಲಕ,ಕುಕ್ಕೆ ಲಿಂಗದ ಬಳಿಯಿದ್ದ ಬೆಳ್ಳಿಯ ಆಭರಣ,ಪ್ರಾಚೀನ ಕಾಲದ ಪಂಚಲೋಹದ ವಿಗ್ರಹಗಳು ನಾಪತ್ತೆಯಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳೀಯ ಭಕ್ತರು ಜಿಲ್ಲಾ ಭ್ರಷ್ಟಾಚಾರ ದಳಕ್ಕೆ ನೀಡಿದ ದೂರಿನ ಅನ್ವಯ ದೇವಾಲಯದ ಮಾಜಿ ಟ್ರಸ್ಟಿಯಾಗಿರುವ ಮೂನಪ್ಪ ಮೊನಾಡು ನಾಪತ್ತೆಯಾಗಿರುವ ಗಮನಕ್ಕೆ ಬಂದಿದ್ದು ಈ ಬಗ್ಗೆ ಅರ್ಚಕರ ಬಳಿ ವಿಚಾರಿಸಿದ ಸಂದರ್ಭ ಯಾವುದೇ ಸೂಕ್ತ ಉತ್ತರ ಸಿಗದಿದ್ದಾಗ ದೇವಾಲಯದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಾಹಣಾಧಿಕಾರಿಗಳಿಗೆ ನವೆಂಬರ್ 22,2019 ರಂದು ದೂರು ನೀಡಲಾಗಿದೆ,ಆದರೆ ಯಾವುದೇ ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಕ್ಕೆ ಈಡುಮಾಡಿದೆ.

error: Content is protected !!