ಕುಂದಾ ಈಚೂರು ಗ್ರಾಮದಲ್ಲಿ ಹುಲಿಯ ಹೆಜ್ಜೆ ಗುರುತು

●ನಾಗರಿಕರು ಎಚ್ಚರಿಕೆ ವಹಿಸುವುದು ಅಗತ್ಯ
ಕೋರೊನ ಎಂಬ ಕರಿನೆರಳಿನಲ್ಲಿ ಜನರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದು, ಇದೀಗ ಪೊನ್ನಂಪೇಟೆ ಸಮೀಪದ ಕುಂದಾ ಈಚೂರು ಗ್ರಾಮದಲ್ಲಿ ಬೃಹತ್ ಗಾತ್ರದ ಹುಲಿಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು ಜನ ಭಯಬೀತರಾಗಿದ್ದಾರೆ.
ಇಲ್ಲಿನ ಗ್ರಾಮದ ಮದ್ರೀರ ವಿಶು ಎಂಬುವವರಿಗೆ ಸೇರಿದ ಗದ್ದೆಯ ತೋಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಕಳೆದ ವಾರದಲ್ಲಿ ಇಲ್ಲಿಗೆ ಸಮೀಪದ ಕುಂದಾ ಬೆಟ್ಟದಲ್ಲಿ ಇಲ್ಲಿನ ವ್ಯಕ್ತಿಯೊಬ್ಬರಿಗೆ ಹುಲಿ ಕಾಣಿಸಿಕೊಂಡಿದ್ದು, ಇದು ಅದೇ ಹುಲಿಯಾಗಿರಬಹುದು ಬೆಟ್ಟದಿಂದ ಇಳಿದು ಬಂದಿರುವ ಸಾಧ್ಯತೆ ಇದೆ. ಹುಲಿಯ ಹೆಜ್ಜೆ ಗುರುತು ನೋಡಿದ್ದಾಗ ಹುಲಿ ಬಿ. ಶೆಟ್ಟಿಗೇರಿ ಭಾಗಕ್ಕೆ ಹೋಗಿರುವ ಸಾದ್ಯತೆ ಇದ್ದು ಅಥವಾ ಇದೇ ಗ್ರಾಮದಲ್ಲಿಯೂ ಉಳಿದು ಕೊಂಡಿದೆಯೋ ಗೊತ್ತಿಲ್ಲ ಎನ್ನುತ್ತಾರೆ ಅವರು. ಕಳೆದೆರಡು ದಿನಗಳ ಹಿಂದೆ ಈ ಭಾಗದಲ್ಲಿ ಸುರಿದ ಮಳೆಯಿಂದ ಮಣ್ಣು ಹದಬಿದ್ದು ಹುಲಿಯ ಹೆಜ್ಜೆ ಗುರುತು ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ಊರಿನ ಸುತ್ತಮುತ್ತಲಿನ ಜನ ಹಾಗೂ ಕುಂದಾ ಬೆಟ್ಟಕ್ಕೆ ಹೋಗುವ ಮಂದಿ ಎಚ್ಚರ ವಹಿಸುವುದು ಅಗತ್ಯವಾಗಿದ್ದು. ಕುಂದಾ ಬೆಟ್ಟದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಇದ್ದು ಎಚ್ಚರಿಕೆ ಅಗತ್ಯವಾಗಿದೆ.