ಕಿರುತೆರೆ ನಟಿ ಸವಿ ಮಾದಪ್ಪ ಅಂತ್ಯಕ್ರಿಯೆ

ಕಿರುತೆರೆ ನಟಿ ಸವಿ ಮಾದಪ್ಪ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು.
ಕುಶಾಲನಗರದಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಟ್ಟು ಸುಂಟಿಕೊಪ್ಪದ ಚಿಕ್ಕಂಡ ಐನ್ ಮನೆಗೆ ಆಂಬುಲೆನ್ಸ್ ಮೂಲಕ ತೆಗೆದುಕೊಂಡು ಹೋಗಿದ್ದು, ಕೊಡಗಿನ ಸಂಪ್ರದಾಯದಂತೆ ಅವಿವಾಹಿತೆಯಾಗಿದ್ದ ಸವಿ ಮಾದಪ್ಪಳಿಗೆ ಬಾಳೆ ದಿಂಡಿನೊಂದಿಗೆ ವಿವಾಹ ಕಾರ್ಯ ನಡೆಸಿ, ಅಂತ್ಯಕ್ರಿಯೆ ನೆರವೇರಿಸಲಾಯಿತು.