fbpx

ಕಿತ್ತಳೆನಾಡಿನಲ್ಲಿದ್ದಾರೆ ಯಾರಿಗೂ ಅರಿಯದ ಕಂಠದಾನ ಕಲಾವಿದ…!

ವಿಶೇಷ ವರದಿ : ಲಕ್ಷ್ಮೀಕಾಂತ್ ಕೊಮಾರಪ್ಪ

ಕೊಡಗು(ಸೋಮವಾರಪೇಟೆ): ಇತ್ತೀಚೆಗೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀಕೃಷ್ಣ ಧಾರಾವಾಹಿಯ ಭದ್ರಕ್ಷಾ ಪಾತ್ರ,ಕಲರ್ಸ್ ಕನ್ನಡಲ್ಲಿ ಪ್ರಸಾರವಾಗುವ ಚಕ್ರವರ್ತಿ ಅಶೋಕಾ ಧಾರವಾಹಿಯ ರಾಧಗುಪ್ತ ಪಾತ್ರಗಳಿಗೆ ಧ್ವನಿ ನೀಡಿದ್ದಾರೆ. ಮೂಲತಃ ಕೊಡಗಿನ ತಾಲ್ಲೂಕಿನ ತಾಕೇರಿ ಗ್ರಾಮದ ಇವರ ಹೆಸರು ನಿಶ್ಚಿತ್ ಕಿರುತೆರೆ, ಬೆಳ್ಳೆತೆರೆ ಹಾಗೂ ಕನ್ನಡಿಗರ ಮನಗೆದ್ದ ಯುವ ಪ್ರತಿಭೆ. ಇವರ ಮತ್ತೂಂದು ವಿಶೇಷ ಎಂದರೆ…

ಹಾಲಿವುಡ್ ಫಿಲಂ ಟರ್ಮಿನೆಟರ್ ಡಾರ್ಕ್ ಪೆಟ್ ಎಂಬ ಸಿನಿಮಾದ ನಟರೊಬ್ಬರಿಗೆ ಡಬ್ಬಿಂಗ್ ಸಹಾ ಮಾಡಿದ್ದಾರೆ.ತಾಕೇರಿ ಗ್ರಾಮದ ಹೊಸೂರುಕಳ್ಳಿಯ ಲಕ್ಷ್ಮಯ್ಯ ಹಾಗೂ ಚಿನ್ನಮ್ಮ ದಂಪತಿಯ ಪುತ್ರ ನಿಶ್ಚಿತ್ ಸ್ಥಳೀಯ ಶಾಲೆಯಲ್ಲಿ ವ್ಯಾಸಂಗ ಮುಗಿಸಿ ಪಿ.ಯು.ಸಿಯನ್ನು ಸೋಮವಾರಪೇಟೆಯ ಸಂತ ಜೋಷೇಪರ ಕಾಲೇಜಿನಲ್ಲಿ ಮುಗಿಸಿ ಜೆ.ಎಸ್.ಎಸ್ ನಲ್ಲಿ ಪದವಿಯನ್ನು ಮುಗಿಸಿದರು.
ನಂತರ ಮೈಸೂರಿನಲ್ಲಿ ಮಂಡ್ಯ ರಮೇಶ್ ಅವರ ಗರಡಿಯಲ್ಲಿ ರಂಗಭೂಮಿ ಕಲಾವಿದರಾಗಿ ಹೊರ ಹೊಮ್ಮಿದರು.

ಈ ಹಾಲಿವುಡ್ ಸಿನಿಮಾಗೆ‌ ಡಬ್ಬಿಂಗ್ ಕಲಾವಿದರಾಗಿ ಪಾತ್ರ ವಹಿಸಿದ್ದಾರೆ

ಕಿರುತೆರೆಯ ಮಂಗಳೂರು ಹುಡುಗಿ ಹುಬ್ಬಳ್ಳಿ ಹುಡುಗ, ಸುವರ್ಣ ಚಲನಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ ನಿಶ್ಚಿತ್.

ಇವರು ಚಿಕ್ಕ ವಯಸ್ಸಿನಿಂದಲೇ ನಟನಾಗುವ ಕನಸು ಕಂಡಿರುವ ಇವರು ತೆರೆಮರೆ ಯಲ್ಲಿ ಇದ್ದುಕೊಂಡು ಕಂಠಧಾನ ಮಾಡುತ್ತಿದ್ದಾರೆ. ಕನಸ್ಸು ಬೆಟ್ಟದಷ್ಟಿದೆ, ಮತ್ತಷ್ಟು ಸಾಧನೆ ಮಾಡಬೇಕಾಗಿರುವ ನಿಶ್ಚಿತ್ ಮುಂದಿನ ಅವಕಾಶಗಳಿಗಾಗಿ ಕಾಯುತ್ತಿದ್ದಾರೆ. ಸಾಕಷ್ಟು ಕಲಾವಿದರನ್ನು ಜಿಲ್ಲೆ ಸ್ಯಾಂಡಲ್ ವುಡ್ ,ಟಾಲಿವುಡ್,ಬಾಲಿವುಡ್ ಹೀಗೆ ಇಲ್ಲಿನ ಕಲಾವಿದ ಹಾಲಿವುಡ್ ವರೆಗೆ ತಲುಪಿದ್ದಾರೆ ಎನ್ನುವುದೇ ಹೆಮ್ಮೆಯ ವಿಷಯ. ಇನ್ನಷ್ಟು ಅವಕಾಶ ಇವರಿಗೆ ಒದಗಿ ಬರಲಿ ಎನ್ನುವುದು ನಮ್ಮ ಆಶಯ.

error: Content is protected !!