ಕಿಡ್ನಿ ಸ್ಟೋನಿಗೆ ರಾಮಬಾಣ ಬಾಳೆದಿಂಡು!

ಬಾಳೆದಿಂಡಿನಿಂದ ರುಚಿಕರ ಪಲ್ಯ ಮತ್ತು ಸಾಸಿವೆ ತಯಾರಿಸಬಹುದು ಎಂಬುದು ನಿಮಗೆಲ್ಲಾ ತಿಳಿದೇ ಇದೆ. ಇದನ್ನು ಬಿಡಿಸುವುದು ಕಷ್ಟ ಎಂದು ಬಳಸದೆ ಎಸೆಯುವ ತಪ್ಪನ್ನು ಮಾತ್ರ ಮಾಡದಿರಿ. ಇದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತೇ

ಕಿಡ್ನಿ ಕಲ್ಲುಗಳಿಗೆ ಬಾಳೆದಿಂಡು ಹೇಳಿ ಮಾಡಿಸಿದ ಔಷಧ ಕಲ್ಲುಗಳನ್ನು ಕಿಡ್ನಿಯಿಂದ ಹೊರಹಾಕುವುದರ ಜತೆಗೆ ಮತ್ತೆ ಈ ಸಮಸ್ಯೆ ಹುಟ್ಟದಂತೆ ನೋಡಿಕೊಳ್ಳುತ್ತದೆ.

ಒಂದು ಲೋಟ ಬಾಳೆದಿಂಡಿನ ರಸಕ್ಕೆ ಚಿಟಿಕೆ ಉಪ್ಪು ಬೆರೆಸಿ ಕುಡಿಯುವುದರಿಂದ ಹೆಚ್ಚು ಹೊತ್ತು ನಿಮಗೆ ಹಸಿವಿನ ಅನುಭವ ಆಗುವುದಿಲ್ಲ. ಇದರಲ್ಲಿ ನಾರಿನಂಶ ಅಧಿಕವಾಗಿದ್ದು ನಿತ್ಯವೂ ಇದನ್ನು ಬಳಸುತ್ತಿದ್ದರೆ ತೂಕ ಇಳಿಸುವುದು ಸುಲಭವಾಗುತ್ತದೆ.

ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅಸಿಡಿಟಿ ಸಮಸ್ಯೆಯೂ ದೂರವಾಗುತ್ತದೆ. ಇದರಲ್ಲಿ ಹೇರಳವಾಗಿ ನಾರಿನಂಶ ಇರುವುದರಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.

ಇದರಲ್ಲಿ ಯಾವುದೇ ರೀತಿಯ ಸಕ್ಕರೆಯ ಅಂಶ ಇಲ್ಲದಿರುವುದರಿಂದ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದ ಆಹಾರ. ಮೂತ್ರಕೋಶದ ಸೋಂಕನ್ನು ತಡೆಯುವ ಇದರಲ್ಲಿ ವಿಟಮಿನ್ ಮತ್ತು ಪೊಟಾಶಿಯಂ ಪ್ರಮಾಣ ಧಾರಾಳವಾಗಿದೆ.

error: Content is protected !!