ಕಿಂಗ್ ಖಾನ್ ಪುತ್ರನ ಡ್ರಗ್ಸ್ ಪಾರ್ಟಿ: ಬಂಧಿಸಿ, ಚೆಕ್ ಅಪ್ಗೆ ಕರೆದೊಯ್ದ ಪೊಲೀಸರು

ಮುಂಬೈ: ಕ್ರೂಸ್ನಲ್ಲಿ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾಗಿದ್ದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಸತತ 7 ಗಂಟೆಗಳ ವಿಚಾರಣೆ ಬಳಿಕ ವಶಕ್ಕೊಳಗಾದವರನ್ನು ಬಂಧಿಸಲಾಗಿದ್ದು ಸದ್ಯ ಮೆಡಿಕಲ್ ಚೆಕಪ್ಗಾಗಿ ಕರೆದೊಯ್ಯಲಾಗಿದೆ.
ಆರ್ಯನ್ ಖಾನ್ ಸೇರಿದಂತೆ ಒಟ್ಟು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ ಎಂಬ ಮಾಹಿತಿ ಇದೆ. ವೈದ್ಯಕೀಯ ಚಿಕಿತ್ಸೆಯ ನಂತರ ಬಂಧಿತರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕೇಳುವ ಸಾಧ್ಯತೆ ಇದೆ.
ನಿನ್ನೆ ರಾತ್ರಿ ಮುಂಬೈ ಬಂದರಿನಲ್ಲಿ ಕ್ರೂಸ್ ಒಂದರಲ್ಲಿ ಡ್ರಗ್ಸ್ ಪಾರ್ಟಿ ನಡೆದಿದೆ ಎಂಬ ಮಾಹಿತಿಯ ಮೇರೆಗೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಸಹ ಪತ್ತೆಯಾಗಿದ್ದು ಹಲವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು.