ಕಾವೇರಿ ಮಾತೆಗೆ 95 ನೇ ಹೋಸ್ತಿಲ ಹುಣ್ಣುಮೆ ಆರತಿ

ಕುಶಾಲನಗರ : ಕೊಡಗಿನ ಜೀವನಾಡಿ ಕಾವೇರಿ ಮಾತೆಗೆ ಕುಶಾಲನಗರದ ಕಾವೇರಿ ನದಿಯ ತಪ್ಪಲಿನಲ್ಲಿ ಇರುವ ಕೊಡಗಿನ ಜೀವನಾಡಿ ಕಾವೇರಮ್ಮ ದೇವಾಲಯದಲ್ಲಿ ಇಂದು ಸರಳವಾಗಿ ಹೋಸ್ತಿಲ ಹುಣ್ಣುಮೆ ಪ್ರಯುಕ್ತ ಕಾವೇರಿ ಮಾತೆಗೆ ಆರತಿ ಯನ್ನು ಮಾಡಲಾಯಿತು ದೇವಿ ಪ್ರತಿಮೆಗೆ ಮಡಿ ಬಟ್ಟೆ ಮತ್ತು ಹೂವು ,ತುಳಸಿ , ಮಾಲೆಗಳಿಂದ ಅಲಂಕರಿಸಿ ಎಳನೀರು ಅಬೀಷೆಕದೊಂದಿಗೆ ಕಾವೇರಿ ನದಿಗೆ ಬಾಗಿನ ಅರ್ಪಿಸಿ ಸರಳವಾಗಿ ನೇರವೆರಸಲಾಯಿತು .ಇದೇ ಸಂದರ್ಭದಲ್ಲಿ ಭಾರವಿ ಕನ್ನಡ ಸಂಘದ ಮುಖ್ಯಸ್ಥರಾದ ಬಬೀಂದ್ರ ಪ್ರಾಸದ್ ರವರು ಮಾತಾನಾಡಿ ಇಷ್ಟು ದಿನಗಳಿಂದ ಕರೋನಾ ಭಯದಿಂದ ಹೆದರಿಕೊಂಡು ಇದ್ದ ಜನರಿಗೆ ಈಗ ಮತ್ತೊಂದು ವೈರಸ್ ಬ್ರಿಟನ್ ಮೂಲದ ರೂಪಾಂತರಿತ ಮತ್ತೆ ಆತಂಕ ಮೂಡಿಸುತ್ತಿದೆ ,ತಾಯಿ ಕಾವೇರಮ್ಮ ನಾಡಿನ ಸಮಸ್ತ ಜನರಿಗೆ ಧೈರ್ಯ ತುಂಬಲಿ ಎಂದು ಎಲ್ಲರೂ ಪ್ರಾರ್ಥಿಸೋಣ ಎಂದು ತಿಳಿಸಿದ್ದರು .ಈ ಸರಳ ಕಾವೇರಿ ಮಾತೇಯ ಆರತಿ ಪೂಜೆ ಕಾರ್ಯಕ್ರಮದಲ್ಲಿ ಎಸ್ ಎಲ್ ಎನ್ ಸಂಸ್ಥೆಯ ವಿಶ್ವನಾಥ್ ಮತ್ತು ಕುಟುಂಬ, ಭಾರವಿ ಸಹೋದರರಾದ ರವೀಂದ್ರ ಪ್ರಸಾದ್ , ವಿಜೇಂದ್ರ ಪ್ರಸಾದ್ , ಸೋಮಶೇಖರ್ , ಮತ್ತು ಸ್ಥಳೀಯ ಭಕ್ತರು ಪಾಲ್ಗೊಂಡು ತೀರ್ಥ ಪ್ರಸಾದವನ್ನು ಸ್ವೀಕರಿಸಿ ತಾಯಿ ಕಾವೇರಿ ಮಾತೆಯ ಅನುಗ್ರಹ ಪಡೆದುಕೊಂಡರು.

error: Content is protected !!