fbpx

ಕಾವೇರಿ ನದಿ ಕೊರೆತ ತಡೆಯುವಲ್ಲಿ ಮಾವಿನ ಮರಗಳ ಪಾತ್ರ: ದುಬಾರೆ ವ್ಯಾಪ್ತಿಯಲ್ಲಿವೆ ದಶಕಗಳ ಹಳೆಯದಾದ ಮರಗಳು

ಮರಗಳು ಒಮ್ಮೆ ಭೂಮಿಯೊಳಗೆ ಹುದುಗಿಬಿಟ್ಟರೆ, ಅದೆಂತಹದೇ ಪ್ರವಾಹ ಬರಲಿ ಅವುಗಳನ್ನು ತಡೆಯುವುದರ ಜೊತೆಗೆ ಜನವಸತಿ ಪ್ರದೇಶಕ್ಕೆ ನುಸುಳದಂತೆ ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಇದಕ್ಕೆ ಸಾಕ್ಷಿ ಎನ್ನುಂತೆ ಕುಶಾಲನಗರದ ದ್ವೀಪ ಉದ್ಯಾನವನ ಕಾವೇರಿ ನಿಸರ್ಗಧಾಮ ಮತ್ತು ದುಬಾರೆಯ ನಡುವೆ ಕಂಡು ಬರುವ ನದಿ ಪಾತ್ರದಲ್ಲಿರುವ ಮರಗಳು, ಅಂದ ಹಾಗೆ ಇವುಗಳೆಲ್ಲವೂ ಮಾವಿನ ಮರಗಳು ಕಾಯಿ ಮಿಡಿಯಾದರೂ, ಉಪ್ಪಿನಕಾಯಿಗೆ, ಹಣ್ಣಾದರೂ ತಿನ್ನಲು ಅಸಾಧ್ಯ ಎನ್ನುವ ವಿಚಿತ್ರ ಜಾತಿಯ ಮರಗಳ ಕಾಂಡಗಳನನ್ನೇ ಗಮನಿಸಿದರೆ ತಿಳಿಯುತ್ತದೆ. ಅದೆಷ್ಟೋ ಚಲನಚಿತ್ರಗಳಲ್ಲಿ ಇಲ್ಲಿನ ದಂಡೆಯ ಪ್ರದೇಶಗನ್ನು ಬಳಸಲಾಗಿದ್ದು, ಅಂದು ಹೇಗಿದೆಯೋ ಇಂದೂ ಹಾಗೇ ಇವೆ.

ಇವುಗಳು ಇರುವುದಿಂದಲೇ ಪ್ರವಾಹಕ್ಕೆ ಕಡಿವಾಣ ಬಿದ್ದಿದೆ ಎನ್ನುತ್ತಾರೆ ಸ್ಥಳೀಯರು. ಸುಮ್ಮನೆ ದುಬಾರೆ ಕಡೆ ಹೋದರೆ, ರಾಫ್ಟಿಂಗ್, ಆನೆ ಸಫಾರಿ ಜೊತೆಗೆ ಇವುಗಳನ್ನೂ ಒಮ್ಮೆ ಗಮನಿಸಿ ಇದರ ಪ್ರಮುಖ್ಯತೆ ನದಿ ಪಾತ್ರದಲ್ಲಿ ಎಷ್ಟಿದೆ ಎಂದು ತಿಳಿಯುತ್ತದೆ.

error: Content is protected !!