ಕಾವೇರಿ ನದಿಯಲ್ಲಿ ತೇಲುತ್ತಿದೆ ಮಾಂಸದ ತ್ಯಾಜ್ಯ!

ಕೊಡಗು: ಕಳೆದ ಒಂದೆರೆಡು ದಿನಗಳಿಂದ ಕಾಫಿ ತೋಟದಲ್ಲಿ ಗೋವುಗಳನ್ನು ಅಪಹರಿಸಿ ಹತ್ಯೆ ಮಾಡಿ,ಮಾಂಸ ಮಾರಾಟ ಪ್ರಕರಣಗಳು ಜೀವಂತವಾಗಿರುವ ಬೆನ್ನಲ್ಲೇ, ಮಾಂಸದ ತ್ಯಾಜ್ಯಗಳು ನದಿಗೆ ಹಾಕಿ ಕಲುಶಿತ ಮಾಡಿರುವುದು ಬೆಳಕಿಗೆ ಬಂದಿದೆ.

ಕರಡಿಗೋಡು ಮೂಲಕ ಹರಿದು ಹೋಗುವ ಕಾವೇರಿ ನದಿಯಲ್ಲಿ ಚೀಲಗಳಲ್ಲಿ ಗೋವು ಮತ್ತು ಇತರೆ ಪ್ರಾಣಿಗಳ ತ್ಯಾಜ್ಯಗಳನ್ನು ಯುವ ಕೇಸರಿ ಪಡೆಗೆ ಗಮನಕ್ಕೆ ಬಂದಿದ್ದು, ಅದರ ಬಳಿ ತೆರಳಿದರೆ ಗಬ್ಬು ನಾರುತ್ತಿರುವ ವಾಸನೆ ಬೀರುತ್ತಿದೆ. ಇಷ್ಪೆಲ್ಲಾ ನಡೆಯುತ್ತಿದ್ದರೂ, ಪಂಚಾಯ್ತಿ ಏನು ಮಾಡುತ್ತಿದೆ ಎನ್ನುವುದೇ ಎದ್ದಿರುವ ಪ್ರಶ್ನೆ…!

error: Content is protected !!