ಕಾಳಜಿ ಕೇಂದ್ರದಿಂದ ಮರಳಿ ಮನೆಗೆ

ತೀವ್ರ ಪ್ರಕೃತಿ ವಿಕೋಪದಿಂದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರು ತಮ್ಮ ಮನೆಗಳತ್ತ ತೆರಳಲು ಸಿದ್ಧರಾಗುತ್ತಿದ್ದಾರೆ.

ಮಳೆ ಇದೀಗ ತಗ್ಗಿರುವ ಹಿನ್ನಲೆಯಲ್ಲಿ ಊರುಬೈಲು ಚೆಂಬು ಹಿರಿಯ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರದಲ್ಲಿ ತಂಗಿದ್ದ 9 ಮಂದಿ, ಮೂರು ಕುಟುಂಬದ ಪೈಕಿ 2 ಕುಟುಂಬಗಳು ಈ ಮೊದಲೇ ತೆರಳಿದ್ದು, ಮತ್ತೊಂದು ಕುಟುಂಬ ಇದೀಗ ತರಳಿದೆ.

ಕಾಳಜಿ ಕೇಂದ್ರ ಸಂಪೂರ್ಣ ಖಾಲಿಯಾಗಿರುವುದರಿಂದ,ಗ್ರಾಮ ಲೆಕ್ಕಿಗರು, ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕಾಳಜಿ ಕೇಂದ್ರವನ್ನು ಮುಚ್ಚಲಾಗಿದೆ.

error: Content is protected !!