ಕಾಲೇಜಿನ ಕಟ್ಟಡದ ನವೀಕರಣಕ್ಕೆ ಗುದ್ದಲಿ ಪೂಜೆ

ಕಾವೇರಿ ವಿದ್ಯಾಸಂಘದ ಅಧ್ಯಕ್ಷರಾದ ಹೊಸೂರು ಸತೀಶ್ ಕುಮಾರ್ ಜೋಯಪ್ಪ ಕಳೆದ
ಸುಮಾರು ೨ ವರ್ಷಗಳ‌ ಹಿಂದೆಯೇ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿ.ಜಿ.ಎಸ್ ಸಂಸ್ಥೆಗೆ ನೀಡಲಾಗಿತ್ತು ಆದರೆ ಕೋವಿಡ್ ಮಹಾಮಾರಿಯಿಂದಾಗಿ ಯಾವುದೇ ರೀತಿಯ ಕಾರ್ಯಕ್ರಮ ಗಳು‌ ಕೂಡ ಕಾರ್ಯಗತ ಮಾಡಲಾಗಲಿಲ್ಲ ಆದರೆ ಈ ವರ್ಷದ ಲ್ಲಿ ತುಂಬಾ ಕಾಳಜಿಯಿಂದ ಏನಾದರೂ ಬದಲಾವಣೆ ತರುವ ನಿಟ್ಟಿನಲ್ಲಿ ಸುಮಾರು ೧ ಕೋಟಿ ವೆಚ್ಚದಲ್ಲಿ ಕಟ್ಟಡ ನವೀಕರಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಈ ಸುಂದರ ಸಮಾರಂಭದಲ್ಲಿ ಬಿ.ಜಿ.ಎಸ್ ಸಂಸ್ಥೆಯ ಆಡಳಿತ ಮಂಡಳಿ ಪರವಾಗಿ ಮ್ಯಾನೇಜರ್ ಚಂದ್ರಶೇಖರ್ ಹಾಗೂ ಹಾಸನ ಮಠದ ಗುರುಗಳ ಸಹಾಯಕರಾದ ರತನ್ ಹಾಜರಿದ್ದರು. ಇದೇ ಸಂದರ್ಬದಲ್ಲಿ ವಿದ್ಯಾಸಂಘದ ಕಾರ್ಯದಶಿಗಳಾದ ನಿಡ್ಯಮಲೆ ರವೀಂದ್ರ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ದಿವಾಕರ್.ಕೆ.ಜೆ ಪ್ರೌಡಶಾಲಾ ವಿಭಾಗದ ಮುಖ್ಯಶಿಕ್ಷಕರಾದ ಶ್ರೀಕೃಷ್ಣ. ಜೆ ರವರು ಉಪನ್ಯಾಸಕವರ್ಗದವರು.ಶಿಕ್ಷಕರು ಆಡಳಿತ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

error: Content is protected !!