ಕಾಲಿವುಡ್ ‘ಇಳಯ ತಲಪತಿ’ ಹುಟ್ಟು ಹಬ್ಬವಿಂದು!

ಕಾಲಿವುಡ್ಡಿನ ‘ಇಳಯತಲಪತಿ’ ಎಂದೇ ಪ್ರಖ್ಯಾತಿ ಪಡೆದಿರುವ ವಿಜಯ್ ಅವರ ಹುಟ್ಟುಹಬ್ಬ ಇಂದಾಗಿದೆ. ಅಸಂಖ್ಯಾತ ಅಭಿಮಾನಿಗಳು ವಿಜಯ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದಾರೆ. ಅವರ ಹರ್ಷೋತ್ಕಾರ ಸಮಾಜಿಕ ಜಾಲತಾಣದಲ್ಲಿ ಮುಗಿಲು ಮುಟ್ಟಿದೆ. ಈಗಾಗಲೇ ವಿಜಯ್ ಅಭಿಮಾನಿಗಳು ಅವರ ಮುಂದಿನ ಸಿನಿಮಾ ಮಾಸ್ಟರ್ ಟ್ರೇಲರ್ ಗಾಗಿ ಕಾಯುತ್ತಿದ್ದು, ಕೆಲ ದಿನಗಳ ಹಿಂದೆ ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆ ಆಗಿತ್ತು.

ಈವತ್ತಿನ ಅವರ ಹುಟ್ಟು ಹಬ್ಬವನ್ನು ಕೊರೋನಾ ಸಾಂಕ್ರಾಮಿಕ ಸೊಂಕು ಅತಿಯಾಗಿರುವುದರಿಂದ ಸರಳವಾಗಿ ನಡೆಸಲು ನಿರ್ಧರಿಸಿದ್ದಾರೆಂಬ ಮಾಹಿತಿ ತಿಳಿದು ಬಂದಿದೆ.