ಕಾರ್ ಮ್ಯೂಸಿಯಂಗೆ ಭೇಟಿ ನೀಡಿದ ಧರ್ಮಾಧಿಕಾರಿಗಳಾದ ಶ್ರೀ ಡಾ. ವಿರೇಂದ್ರ ಹಗ್ಡೆ

ಇಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವಿರೇಂದ್ರ ಹೆಗ್ಡೆ ಅವರು ಕೊಡಗಿನ ನೆಲಿಹುದಿಕೇರಿಯಲ್ಲಿರುವ ಮುಬಾರಕ್ ಎಸ್ಟೇಟಿನ ವಿಂಟೇಜ್ ಕಾರ್ ಮ್ಯೂಸಿಯಂ ನೋಡಲು ಆಗಮಿಸಿದ್ದರು.
ಪೂಜ್ಯರನ್ನು ಆತ್ಮೀಯವಾಗಿ ಬರಮಾಡಿಕೊಂಡ ಮ್ಯೂಸಿಯಂನ ಮಾಲಿಕ ಅಶ್ರಫ್ ಅವರು ಪ್ರತಿ ಕಾರುಗಳ ನೆನಪುಗಳನ್ನು ಅವರೊಂದಿಗೆ ಹಂಚಿಕೊಂಡರು. ಕಾವಂದರು ಕೂಡ ಮ್ಯೂಸಿಯಂನ ಸುಸ್ಥಿತಿಯ ಕುರಿತು ಶ್ಲಾಘನೆ ವ್ಯಕ್ತ ಪಡಿಸಿದರು.