fbpx

ಕಾರ್ಗಿಲ್ ವಿಜಯ್ ದಿವಸ್ ವಿಶೇಷ

ಕಾರ್ಗಿಲ್ ಕದನ
ಹುತಾತ್ಮ ಯೋಧ:


ಕಾರ್ಗಿಲ್ ಸಂಘರ್ಷದಲ್ಲಿ ಕೊಡಗಿನ ಹಲವು ಮಂದಿ ಜಿಲ್ಲೆಯ ವೀರ ಪುತ್ರರು ವೀರ ಮರಣವನ್ನು ಅಪ್ಪಿದ್ದಾರೆ ಅದರಲ್ಲಿ ಚಿಕ್ಕ ವಯಸ್ಸಿನಲ್ಲೇ ಸೇನೆ ಸೇರಿ ತನ್ನ 25ನೇ ವರ್ಷಕ್ಕೆ ವೀರ ಮರಣವನ್ನಪಿದರಲ್ಲಿ ಕೊಡಗಿನ ಸವಿನ್ ಕೂಡ ಒಬ್ಬರು.

1993ರಲ್ಲಿ ವಿದ್ಯಭ್ಯಾಸ ಮೊಟಕುಗೊಳಿಸಿ ಸೇನೆಗೆ ಸೇರ್ಪಡೆಯಾದ ಸವಿನ್ ಏಳು ವರ್ಷದಲ್ಲಿ ಎರಡು ಭಾರಿ ಭಡ್ತಿ ಪಡೆದು ಕಾರ್ಗಿಲ್ ಸಂಘರ್ಷ ಸಂದರ್ಭ ಜಮ್ಮುವಿನಲ್ಲಿ ಸೇನೋ ಗೂಡಾಚಾರಿ ತಂಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭ ಭಾರತೀಯನೇ ಆದ ಮಹಮದ್ ಸಿದ್ದೀಕಿ ಎಂಬಾತ ಭಾರತದ ಸೇನಾ ಮಾಹಿತಿಗಳನ್ನು ಪಾಪಿ ಪಾಕಿಸ್ಥಾನಕ್ಕೆ ನೀಡುತ್ತಿದ್ದ,ಇದನ್ನು ಅರಿತ ಸುವಿನ್ ತಂಡ ಆತನನ್ನು ಬಂಧಿಸಿ ಆತನ ಸೊಂಟಕ್ಕೆ ಹಗ್ಗ ಕಟ್ಟಿ ಕರೆದುಕೊಂಡು ಬರುತ್ತಿದ್ದರು ಇವರ ಜೊತೆ ಕೊಡಗಿನ ನಾಯಕ್ ರಫೆಲ್ ಎಂಬುವವರು ಇದ್ದರು.

ಸುಮಾರು 200 ಅಡಿ ಪ್ರದೇಶದಲ್ಲಿ ಬರುತ್ತಿದ್ದ ಸಂದರ್ಭ ಉಗ್ರರು ಇವರ ಮೇಲೆ ಗುಂಡಿನ ದಾಳಿ ನಡೆಸಿದರು ಈ ಸಂದರ್ಭ ತಪ್ಪಿಸಲಃ ಯತ್ನಿಸಿದ ಮಹಮದ್ ಸಿದ್ದಿಕಿ 200 ಅಡಿ ಪ್ರಪಾತಕ್ಕೆ ಜಿಗಿದ, ಈತನಿಗೆ ಕಟ್ಟಿದ ಹಗ್ಗವನ್ನು ಸವಿನ್ ಮತ್ತು ರಫೆಲ್ ಕಟ್ಟಿಕೊಂಡ್ಡಿದ್ದರಿಂದ ಮೂವರು ಪ್ರಪಾತಕ್ಕೆ ಬಿದ್ದರು ರಫೆಲ್ ಮತ್ತು ಸವಿನ ಗಂಭೀರ ಗಾಯಗೊಂಡರು ಇದರಲ್ಲಿ ನಾಯಕ್ ರಫೆಲ್ ಚೇತರಿಸಿಕೊಂಡರೆ ನಾಯಕ್ ಸುವಿನ್ ಪೂಂಚ್ ಆಸ್ಪತ್ರೆಯಲ್ಲಿ ವೀರಮರಣವನ್ನಪಿದರು.

ಕಾರ್ಗಿಲ್ ಕದನ ಆರಂಭದ ದಿನದಲ್ಲಿ ಯೋಧರಾದ ಅಬ್ದುಲ್ ರಜಾಕ್, ಈರಪ್ಪ, ಸಿಂಗೂರ್ ಮಾದಪ್ಪ, ಕಾವೇರಪ್ಪ, ವೆಂಕಟ, ವಿ.ಎಲ್ ಗಣೇಶ, ಮೆಜರ್ ಮಂಗೇರಿರ ಮುತ್ತಣ ( ಇವರ ಪ್ರತಿಮೆ ನಗರಸಭೆ ಎದುರಿಗಿದೆ).

ಗಿರಿಧರ್ ಕೊಂಪುಳಿರ, ಪತ್ರಕರ್ತರು
error: Content is protected !!