ಕಾರ್ಗಿಲ್ ವಿಜಯ್ ದಿವಸ್ ಮುನ್ನ ದಿನವೇ ಕೊಡಗಿನಲ್ಲಿ ಸೈನಿಕ ಹಾಗು ಅವನ ಕುಟುಂಬದ ಮೇಲೆ ಮತಾಂಧರಿಂದ ಅಮಾನುಷವಾದ ಹಲ್ಲೆ!

ಕುಟುಂಬ ಸಮೇತ ಕುಶಾಲನಗರದಿಂದ ಮಡಿಕೇರಿಗೆ ಆಗಮಿಸುತ್ತಿದ್ದ ಭಾರತೀಯ ಸೇನೆಯ ಸೈನಿಕ ಮತ್ತವರ ಕುಟುಂಬದ ಸದಸ್ಯರು ಪ್ರಯಾಣಿಸುತ್ತಿದ್ದ ಕಾರಿಗೆ ಹಿಂಬಂದಿಯಿಂದ ಕಾರಿನ ಮೂಲಕ ಡಿಕ್ಕಿ ದುಷ್ಕರ್ಮಿಗಳ ತಂಡ ಮಾತ್ರವಲ್ಲದೇ ಸ್ಥಳಕ್ಕೆ ಕೂಡಲೇ 50 ಕ್ಕೂ ಹೆಚ್ಚು ಮುಸ್ಲಿಂ ಮತಾಂಧ ಗೂಂಡಾಗಳನ್ನು ಕರೆಯಿಸಿ, ಸೈನಿಕರ ಕುಟುಂಬದವರ ಮೇಲೆ ತೀವ್ರ ಹಲ್ಲೆ ನಡೆಸಲಾಗಿದೆ.
ವಯಸ್ಸಾದವರೂ, ಮಹಿಳೆಯರು ಎಂದು ಕೂಡ ನೋಡದೆ ಲೆಕ್ಕಿಸದೇ ಅಮಾನವೀಯವಾಗಿ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು ಪೋಲೀಸರು ಆಗಮಿಸುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.ಗಂಭೀರ ಗಾಯಗೊಂಡಿರುವ ಸೈನಿಕ ಮತ್ತವರ ಕುಟುಂಬದ ಸದಸ್ಯರು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಇಂದು ಕಾರ್ಗಿಲ್ ವಿಜಯೋತ್ಸವದ ತಯಾರಿಯಲ್ಲಿರುವ ದೇಶಭಕ್ತರಿಗೆ ಕೊಡಗಿನಲ್ಲಿ ಸೈನಿಕ ಮತ್ತವರ ಕುಟುಂಬದ ಸದಸ್ಯರ ಮೇಲೆ ನಡೆದ ಅಮಾನುಷ ಹಲ್ಲೆಯಿಂದ ಆಘಾತ ಉಂಟಾಗಿದೆ. ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಯಿಕೇರಿ ಬಳಿ ಇಂದು ಸಂಜೆ 7 ಗಂಟೆ ಸುಮಾರಿಗೆ ನಡೆದ ದುರ್ಘಟನೆ ಇದಾಗಿದ್ದು, ಮತಾಂಧ ಗೂಂಡಾಗಳ ಹೆಡಮುರಿ ಕಟ್ಟುವಲ್ಲಿ ಜಿಲ್ಲಾ ಪೊಲೀಸರು ಕಾರ್ಯ ಪ್ರವೃತ್ತವಾಗಬೇಕಿದೆ.
ಕೊಡಗು ಜಿಲ್ಲೆಯಲ್ಲೇ ಕೊಡಗಿನ ಸೈನಿಕರ ಕುಟುಂಬ ಹಾಗು ಸೈನಿಕನಿಗೇ ಸುಭದ್ರತೆ ಇಲ್ಲದೆ ಹೋದರೆ ಜನಸಾಮಾನ್ಯರ ಗತಿಯೇನು…? ಎಂಬ ಆತಂಕ ಜನ ಮಾನಸವನ್ನು ಕಾಡುತ್ತಿದೆ.