ಕಾರು ಪಲ್ಟಿ, ಪ್ರಯಾಣಿಕರು ಅಪಾಯದಿಂದ ಪಾರು

ಸೋಮವಾರಪೇಟೆಯ ಎಡವನಾಡಿನಲ್ಲಿ ವೇಗವಾಗಿ ಚಲಿಸುತ್ತಿದ್ದ, ಬೆಂಗಳೂರು ನೊಂದಣಿಯ ಮಾರುತಿ ಆಲ್ಟೋ ಕಾರು ನಿಯಂತ್ರಣ ತಪ್ಪಿ ಮಗುಚಿಕೊಂಡ ಘಟನೆ ನಡೆದಿದೆ.


ಇಲ್ಲಿನ ನೇರ ರಸ್ತೆಯಲ್ಲಿ ಯಾವುದೇ ವಾಹನ ದಟ್ಟಣೆ ಇಲ್ಲದ ಕಾರಣ ವೇಗವಾಗಿ ಸಂಚರಿಸಬಹುದು ಎನ್ನಲಾಗಿದ್ದು, ಕಾರು ನಿಯಂತ್ರಣ ತಪ್ಪಿದ ಕಾರಣ ಉರುಳಿ ಬಿದ್ದು ನಜ್ಜುಗುಜ್ಜಾಗಿದೆ.ಚಾಲಕ ಸೇರಿದಂತೆ ಇತರರು ಗಾಯಗೊಂಡು ಚಿಕಿತ್ಸೆ ಪಡೆಯಲಾಗುತ್ತಿಲ್ಲ,ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.