fbpx

ಕಾರುಗಳ ಡಿಕ್ಕಿ ಅಪಾಯದಿಂದ ಪಾರು

ಕೊಡಗು(ಸೋಮವಾರಪೇಟೆ): ಎರಡು ಕಾರುಗಳ ನಡುವೆ ಮುಖಮುಖಿ ಡಿಕ್ಕಿಯಾಗಿ ವಾಹನಗಳು ಸಂಪೂರ್ಣ ನಜ್ಜುಗುಜ್ಜಾದರೂ ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ ಸೋಮವಾರಪೇಟೆಯ ಯಡವನಾಡು ಬಳಿ ನಡೆದಿದೆ.ಇಲ್ಲಿನ ಎಮ್ಮೆ ಬಸವಣ್ಣ ದೇವಾಲದ ಎದುರಿನಲ್ಲೇ ಈ ಘಟನೆ ಸಂಭವಿಸಿದೆ. ಸೋಮವಾರಪೇಟೆಯಿಂದ ಕುಶಾಲನಗರದ ಕಡೆ ತೆರಳುತ್ತಿದ್ದ ಕೃಷಿ ಇಲಾಖೆ ಅಧಿಕಾರಿ ಪುರಂದರ ಎಂಬುವವರ ಕಾರಿಗೆ ಬಜೆಗುಂಡಿಯಿಂದ ಸೋಮವಾರಪೇಟೆ ಕಡಗೆ ಬರುತ್ತಿದ್ದ ರಂಜಿತ್ ಎಂಬುವವರ ಕಾರು ಮುಖಾಮುಖಿಯಾಗಿದ್ದು,ಅಧಿಕಾರಿಯಿದ್ದ ಕಾರು ಬಸವಣ್ಣ ಗುಡಿಯ ಚಪ್ಪರಕ್ಕೆ ಅಪ್ಪಳಿಸಿ ಮಗುಚಿಕೊಂಡಿದೆ.

ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.ಅತೀ ವೇಗವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.ಘಟನೆ ಸಂಬಂಧ ಸೋಮವಾರಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!