ಕಾರಿನ ಮೇಲೆ ಒಂಟಿ ಸಲಗ ದಾಳಿ

ಕೊಡಗು: ಆನೆ ಮತ್ತು ಮಾನವ ಸಂಘರ್ಷ ಮುಂದುವರೆದಿದೆ,ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದಲ್ಲಿನ
ತೋಟಕ್ಕೆ ತೆರಳುತ್ತಿದ್ದ ಮಾರುತಿ ಓಮಿನಿ ಕಾರಿನ ಮೇಲೆ ದಾಳಿ ನಡೆದಿದ್ದು ವಾಹನ ಚಲಾಯಿಸುತ್ತಿದ್ದ ಅಶೋಕ್ ಮತ್ತು ಅವರ ಸಂಬಂಧಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದು ವಾಹನ ಬಹುತೇಕ ಜಖಂಗೊಂಡಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಇದೇ ವೇಳೆ ಹುಲಿ ಹಾವಳಿಂದ ಹೈರಾಣಾಗಿರುವ ಕಾಫಿ ಬೆಳೆಗಾರರಲ್ಲಿ ಆನೆ ದಾಳಿ ನಡೆದಿರುವ ಸಂಬಂಧ ಸಾಕಷ್ಟು ಆಕ್ರೋಶಕ್ಕೆ ಕಾರಣವಾಯಿತು.