ಕಾಫಿ ಮಂಡಳಿಯಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನ

ಸಣ್ಣ ಕಾಫಿ ಬೆಳೆಗಾರರು (10 ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) 2022-23 ನೇ ಸಾಲಿನಲ್ಲಿ 2022 ರ ಸೆಪ್ಟೆಂಬರ್, 30 ರವರೆಗೆ ಕೈಗೊಳ್ಳುವ ಕಾಫಿ ಮರುನಾಟಿ ಹಾಗೂ ಜಲಸಂವರ್ಧನ ಕಾರ್ಯಕ್ರಮಗಳ ಅಡಿಯಲ್ಲಿ ಕಾಫಿ ಮಂಡಳಿಯಿಂದ ಸಹಾಯಧನದ ಸೌಲಭ್ಯವಿರುತ್ತದೆ. ಆದ್ದರಿಂದ, ಬೆಳೆಗಾರರು ತಮ್ಮ ತೋಟಗಳಲ್ಲಿ ಕಾಫಿ ಮರುನಾಟಿ, ಕೆರೆ/ ತೆರೆದ ಬಾವಿ ಅಭಿವೃದ್ಧಿಪಡಿಸಲು ಹಾಗೂ ತುಂತುರು ನೀರಾವರಿ, ಹನಿ ನೀರಾವರಿ ಅಳವಡಿಸಿಕೊಳ್ಳಲು ಪ್ರಯೋಜನವನ್ನು ಪಡೆಯಬಹುದಾಗಿದೆ. ಜಿಲ್ಲೆಯ ಹೆಚ್ಚಿನ ಬೆಳಗಾರರು ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಿದೆ.
ಹೆಚ್ಚಿನ ಮಾಹಿತಿಗೆ ಹತ್ತಿರದ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರಾದ ಶಿವಕುಮಾರ ಸ್ವಾಮಿ ತಿಳಿಸಿದ್ದಾರೆ.